Friday, August 14, 2026

BDA Apartments

Home Crime ವಿಮಾನದ ಟಿಕೆಟ್ ಕಾಯ್ದಿರಿಸಿದ ಪ್ರಜ್ವಲ್..!

ವಿಮಾನದ ಟಿಕೆಟ್ ಕಾಯ್ದಿರಿಸಿದ ಪ್ರಜ್ವಲ್..!

Prajwal booked the flight ticket

 

Information is available that Hassan MP Prajwal Revanna, who is accused in sexual assault and rape case, has booked a flight ticket to come to Bangalore on May 31.

ಬೆಂಗಳೂರು, ಮೇ.29,2024: (www.justkannada.in news) ಮೇ 31ರಂದು ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಕಾಯ್ದಿರಿಸಿರಿಸಿದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ , ಹಾಸನ ಸಂಸದ ಪ್ರಜ್ವಲ್ ರೇವಣ್ಣ.

ಇತ್ತೀಚೆಗಷ್ಟೇ ವಿಡಿಯೊ ಬಿಡುಗಡೆ ಮಾಡಿದ್ದ ಪ್ರಜ್ವಲ್, ಎಸ್‌ಐಟಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ಇರುವಿಕೆಯ ಸ್ಥಳದ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಇದರ ಫಲವಾಗಿ, ಜರ್ಮನಿಯ ಮ್ಯೂನಿಕ್ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣಕ್ಕೆ ಪ್ರಜ್ವಲ್‌ ಬರುವುದು ದೃಢಪಟ್ಟಿದೆ. ಈ ಸಂಬಂಧ ಈಗಾಗಲೇ ಲುಫ್ತಾನ್ನಾ ಏರ್‌ಲೈನ್ಸ್ ವಿಮಾನದಲ್ಲಿ ಪ್ರಜ್ವಲ್ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಲಾಗಿದೆ ಎನ್ನಲಾಗಿದೆ.

key words: Prajwal, booked, the flight ticket, to Bangalore

SUMMARY: 

Information is available that Hassan MP Prajwal Revanna, who is accused in sexual assault and rape case, has booked a flight ticket to come to Bangalore on May 31.

Prajwal had recently released a video saying that he would attend the SIT hearing. Following this, a Lufthansa Airlines flight from Germany’s Munich station to Bangalore’s Kempegowda International Airport was booked in Prajwal’s name, sources said.