Wednesday, August 12, 2026

BDA Apartments

Home Election 2024 ‘ಕೈ’ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸುತ್ತಿರುವುದಕ್ಕೆ ಕಾರಣ ಕೊಟ್ಟ ನಟ ದರ್ಶನ್.

‘ಕೈ’ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸುತ್ತಿರುವುದಕ್ಕೆ ಕಾರಣ ಕೊಟ್ಟ ನಟ ದರ್ಶನ್.

ಮಂಡ್ಯ,ಏಪ್ರಿಲ್,23,2024 (www.justkannada.in): ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ  ಮಂಡ್ಯ ಕ್ಷೇತ್ರ ಭಾರಿ ಕುತೂಹಲ ಮೂಡಿಸಿದ್ದು, ಈ ನಡುವೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸುತ್ತಿದ್ದಾರೆ.

ಇಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ನಟ ದರ್ಶನ್, ಚಲುವರಾಯಸ್ವಾಮಿ ಅವರ  ಕೈ ಬಲಪಡಿಸಲು ಸ್ಟಾರ್ ಚಂದ್ರುಗೆ ಮತ ನೀಡಿ ಎಂದು ಮನವಿ ಮಾಡಿದರು.

ನಾನು ಇಂದು ಕಾಂಗ್ರೆಸ್ ಪರ ಬಂದಿರುವುದಕ್ಕೆ ಒಂದೇ ಕಾರಣವಿದೆ.  2019ರ ಚುನಾವಣೆಯಲ್ಲಿ ಚೆಲುವಣ್ಣ ನಮಗೆ ಸಹಾಯ ಮಾಡಿದ್ರು  ಆ ಒಂದು ಋಣವನ್ನ ಜನ್ಮ ಪೂರ್ತಿ ತೀರಿಸಲು ಆಗಲ್ಲ. ಚಲುವಣ್ಣ ಮಾಡಿದ ಸಹಾಯ 7 ಜನ್ಮವಾದರೂ ತೀರಿಸಲು ಆಗಲ್ಲ. ಹೀಗಾಗಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿರುವುದಾಗಿ ನಟ ದರ್ಶನ್ ತಿಳಿಸಿದ್ದಾರೆ.

ಕಳೆದ ಬಾರಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಟೊಂಕಕಟ್ಟಿ ನಿಂತು ಪ್ರಚಾರ ನಡೆಸಿದ್ದರು.

Key words: mandya, congress, Actor, Darshan