Wednesday, August 19, 2026

BDA Apartments

Home Election 2024 ಮೊದಲ ಹಂತದ ಲೋಕಸಭಾ ಚುನಾವಣೆ: ನಟ ರಜಿನಿಕಾಂತ್ ಸೇರಿ ಹಲವು ಗಣ್ಯರಿಂದ  ಮತದಾನ.

ಮೊದಲ ಹಂತದ ಲೋಕಸಭಾ ಚುನಾವಣೆ: ನಟ ರಜಿನಿಕಾಂತ್ ಸೇರಿ ಹಲವು ಗಣ್ಯರಿಂದ  ಮತದಾನ.

ಚೆನ್ನೈ,ಏಪ್ರಿಲ್, 19,2024 (www.justkannada.in): ಇಂದಿನಿಂದ ಲೋಕಸಭಾ ಚುನಾವಣೆ ಶುರುವಾಗಿದ್ದು ಇಂದು  ಮೊದಲ ಹಂತದಲ್ಲಿ 102 ಸ್ಥಾನಗಳಿಗೆ  ಮತದಾನ ನಡೆಯುತ್ತಿದೆ.

ಇಂದು 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು ಹಲವು ಗಣ್ಯಾತಿಗಣ್ಯರು ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ.  ನಟ ಸೂಪರ್ ಸ್ಟಾರ್ ರಜಿನಿಕಾಂತ್, ಈಶಾ ಪೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌, ನಟರಾದ ಕಮಲ ಹಾಸನ್‌, ಅಜಿತ್‌ ಕುಮಾರ್‌, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ,  ಕೇಂದ್ರ ಸಚಿವ ಗಡ್ಕರಿ, ಸಚಿವ ರಾಜವರ್ಧನ ರಾಥೋಡ್‌, ಉತ್ತರಾಖಂಡ್‌ ಸಿಎಂ ಪುಷ್ಕರ್‌ ಸಿಂಗ್‌, ಮಣಿಪುರ ಸಚಿವ ಬಿರೇನ್‌ ಸಿಂಗ್‌ ಸೇರಿದಂತೆ ಹಲವರು ಮತದಾನ ಮಾಡಿದ್ದಾರೆ .

ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೂ ಮೊದಲ ಹಂತದಲ್ಲೇ ಮತದಾನ ನಡೆಯುತ್ತಿದ್ದು  ಸೂಪರ್​ ಸ್ಟಾರ್​ ರಜಿನಿಕಾಂತ್​, ಕಮಲ್​ ಹಾಸನ್​, ವಿಜಯ್​ ಸೇತುಪತಿ ಹಾಗೂ ಧನುಷ್​ ಸೇರಿದಂತೆ ಸ್ಟಾರ್​ ನಟರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ , ನಟ ಧನುಷ್ ಅವರು ಚೆನ್ನೈನ ಟಿಟಿಕೆ ರಸ್ತೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು . ವಿಜಯ್ ಸೇತುಪತಿ, ಕಿಲ್ಪಾಕ್‌ನ ಚೆನ್ನೈ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದರು. ನಟರಾದ ರಜನಿಕಾಂತ್ ಹಾಗೂ ಕಮಲ್​ ಹಾಸನ್​ ಕೂಡ ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನ ಮಾಡಿದರು.

ಇನ್ನು ಲೋಕಸಭೆ ಚುನಾವಣೆ  ಇಶಾ ಫೌಂಡೇಶನ್​ ನ ಸಂಸ್ಥಾಪಕರಾದ ವಾಸುದೇವ ಅವರು ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಮತ ಚಲಾಯಿಸಿದ್ದಾರೆ. ಕಲಾವಿದರಲ್ಲದೆ, ಮಾಜಿ ಐಪಿಎಸ್​ ಅಧಿಕಾರಿ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ, ತಮಿಳುನಾಡು ಸಿಎಂ ಸ್ಟಾಲಿನ್​ ಮತ್ತು ಸಚಿವ ಉದಯನಿಧಿ ಸ್ಟಾಲಿನ್​ ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ.

Key words: Lok Sabha, elections,  vote