Friday, August 21, 2026

BDA Apartments

Home Front Page ದೇಶದಲ್ಲಿ ಕಾಂಗ್ರೆಸ್ 30 ಸ್ಥಾನ ಗೆಲ್ಲೋದು ಕಷ್ಟ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ.

ದೇಶದಲ್ಲಿ ಕಾಂಗ್ರೆಸ್ 30 ಸ್ಥಾನ ಗೆಲ್ಲೋದು ಕಷ್ಟ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ.

ಚಾಮರಾಜನಗರ,ಏಪ್ರಿಲ್, 3, 2024 (www.justkannada.in): ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 30 ಸ್ಥಾನ ಗೆಲ್ಲೋದು ಕಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭವಿಷ್ಯ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿದ್ದರಾಮಯ್ಯ ಯಾವುದೋ  ಭ್ರಮೆಯಲ್ಲಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ಜನರ ಆಸೆ.  ದೇಶದಲ್ಲಿ ಕಾಂಗ್ರೆಸ್ 30 ಸ್ಥಾನ ಗೆಲ್ಲೋದು ಕಷ್ಟ. ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಸಿದ್ದರಾಮಯ್ಯ ಏನು ಹೇಳ್ತಾರೆ ಅದು ಮುಖ್ಯವಲ್ಲ. ಜನರು ಹೇಳೋದು ಮುಖ್ಯ.  ಕೇಂದ್ರದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ ಎಂದರು.

ಸುಮಲತಾ ಅಂಬರೀಶ್  ಬಿಜೆಪಿ ಸೇರ್ಪಡೆ ಒಳ್ಳೆಯ ನಿರ್ಧಾರ. ಮಂಡ್ಯದಲ್ಲಿ ಹೆಚ್. ಡಿ ಕುಮಾರಸ್ವಾಮಿ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಬಿವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Key words: Congress, bjp,  B.Y. Vijayendra