Wednesday, September 30, 2026

BDA Apartments

ಕುಮಾರಣ್ಣ ಗೆದ್ದು ಕೇಂದ್ರ ಸಚಿವ ಆಗಬೇಕು- ಮಾಜಿ ಸಚಿವ ನಾರಾಯಣಗೌಡ BDA JK_Adv BDA Adv
Home Front Page ಕುಮಾರಣ್ಣ ಗೆದ್ದು ಕೇಂದ್ರ ಸಚಿವ ಆಗಬೇಕು- ಮಾಜಿ ಸಚಿವ ನಾರಾಯಣಗೌಡ.

ಕುಮಾರಣ್ಣ ಗೆದ್ದು ಕೇಂದ್ರ ಸಚಿವ ಆಗಬೇಕು- ಮಾಜಿ ಸಚಿವ ನಾರಾಯಣಗೌಡ.

ಮಂಡ್ಯ,ಮಾರ್ಚ್,30,2024 (www.justkannada.in): ಲೋಕಸಭೆ ಚುನಾವಣೆ ಹಿನ್ನೆಲೆ ಮಾಜಿ ಸಚಿವ, ಬಿಜೆಪಿ ಮುಖಂಡ ನಾರಾಯಣಗೌಡ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಬೆಂಬಲಿಸಲು ಮಾಜಿ ಸಚಿವ ಕೆ.ಸಿ ನಾರಾಯಣಗೌಡ ನಿರ್ಧರಿಸಿದ್ದು ಈ ಕುರಿತು ಮಾತನಾಡಿರುವ ಅವರು, ಕುಮಾರಣ್ಣ ಗೆದ್ದು ಕೇಂದ್ರ ಸಚಿವ ಆಗಬೇಕು. ಮಂಡ್ಯಕ್ಕೆ ಕುಮಾರಣ್ಣ ಬಂದಿರೋದು ನಮ್ಮ ಅದೃಷ್ಟ . ಕುಮಾರಣ್ಣರನ್ನ 1.5  ಲಕ್ಷ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಕುಮಾರಣ್ಣ ಗೆದ್ದರೆ ಮಂಡ್ಯ ಅಭಿವೃದ್ದಿಯಾಗುತ್ತದೆ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಕುಟುಕಿದ ನಾರಾಯಣಸ್ವಾಮಿ,  ಸ್ಟಾರ್ ಚಂದ್ರು ಗುತ್ತಿಗೆದಾರ, ಸಾಹುಕಾರ.  ಹಣಬಲ ಮಂಡ್ಯದಲ್ಲಿ ವರ್ಕೌಟ್ ಆಗಲ್ಲ ಎಂದರು.ಕುಮಾರಣ್ಣ ಗೆದ್ದು ಕೇಂದ್ರ ಸಚಿವ ಆಗಬೇಕು minister narayana gowda

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಹಿನ್ನೆಲೆ ಕೆ.ಸಿ ನಾರಾಯಣಗೌಡ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ನಾರಾಯಣಗೌಡ ಅವರು ಮೈತ್ರಿ ಅಭ್ಯರ್ಥಿ ಬೆಂಬಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Key words: mandya, HD Kumaraswamy, KC Narayanagowda