Tuesday, August 25, 2026

BDA Apartments

Home Crime ಕಾರಿನ ಮೇಲೆ ಹಲ್ಲಿ ಬಿದ್ದಿದ್ದಕ್ಕೆ ಗಾಬರಿಗೊಂಡು ಮರಕ್ಕೆ ಡಿಕ್ಕಿ: ಕಾರು ಚಾಲಕ ಎಸ್ಕೇಪ್…

ಕಾರಿನ ಮೇಲೆ ಹಲ್ಲಿ ಬಿದ್ದಿದ್ದಕ್ಕೆ ಗಾಬರಿಗೊಂಡು ಮರಕ್ಕೆ ಡಿಕ್ಕಿ: ಕಾರು ಚಾಲಕ ಎಸ್ಕೇಪ್…

ಮೈಸೂರು,ಸೆ,14,2019(www.justkannada.in): ಕಾರಿನ ಮೇಲೆ ಮರದ ಮೇಲಿಂದ ಹಲ್ಲಿ ಬಿದ್ದಿದ್ದಕ್ಕೆ ಗಾಬರಿಗೊಂಡ ಕಾರು ಚಾಲಕ ಕಾರನ್ನ ಮರಕ್ಕೆ ಡಿಕ್ಕಿ ಹೊಡೆಸಿ ನಂತರ ಕಾರನ್ನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಮೈಸೂರಿನ ಜೆ.ಪಿ.ನಗರ ಕರ್ನಾಟಕ ಬ್ಯಾಂಕ್ ಎದುರು ಈ  ಘಟನೆ ನಡೆದಿದೆ. ಸ್ಟರ್ಲಿಂಗ್ ಚಿತ್ರಮಂದಿರ ಕಡೆಯಿಂದ ಜೆ.ಪಿ.ನಗರ ಕಡೆಗೆ ಕಾರು ಹೋಗುತ್ತಿತ್ತು. ಈ ವೇಳೆ ಮೇಲಿಂದ  ಹಲ್ಲಿಯೊಂದು ಬಿದ್ದಿದ್ದು ತಕ್ಷಣ ಗಾಬರಿಗೊಂಡ ಚಾಲಕ ಕಾರನ್ನು ಎಡಕ್ಕೆ ತಿರುಗಿಸಿದ್ದಾನೆ. ಕಾರು ವೇಗವಾಗಿ ಮರಕ್ಕೆ ಗುದ್ದಿದ ಪರಿಣಾಮ ಕಾರಿನ ಮುಂಬಾಗ ಸಂಪೂರ್ಣ ಜಖಂಗೊಂಡಿದೆ. ಕಾರು ಚಾಲಕ ಭಯಭೀತನಾಗಿ ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ..

ಸ್ಥಳಕ್ಕೆ ಆಗಮಿಸಿದ  ಸಂಚಾರಿ ಪೊಲೀಸರು ಕಾರನ್ನು ಠಾಣೆಗೆ ತಂದು ನಿಲ್ಲಿಸಿದ್ದಾರೆ.ಕಾರು ಚಾಲಕ ಯಾರು..? ಎಲ್ಲಿಗೆ ಹೊರಟಿದ್ದ ಎಂಬಿತ್ಯಾದಿ ಬಗ್ಗೆ  ಹೆಚ್ಚಿನ ಮಾಹಿತಿಗಳು ಕಲೆ ಹಾಕುತ್ತಿದ್ದಾರೆ.

Key words: mysore-lizard – car- collided – tree-Car Driver -Escape.