Sunday, September 20, 2026

BDA Apartments

ಚುನಾವಣೆ ಬಂದಾಗ ರಾಮನ ಜಪ: ಎಚ್ಚರಿಕೆಯಿಂದ ಮತ ಚಲಾಯಿಸಿ- ಸಚಿವ ಸಂತೋಷ್ ಲಾಡ್ BDA JK...
Home Front Page ಚುನಾವಣೆ ಬಂದಾಗ ರಾಮನ ಜಪ: ಎಚ್ಚರಿಕೆಯಿಂದ  ಮತ ಚಲಾಯಿಸಿ- ಸಚಿವ ಸಂತೋಷ್ ಲಾಡ್.

ಚುನಾವಣೆ ಬಂದಾಗ ರಾಮನ ಜಪ: ಎಚ್ಚರಿಕೆಯಿಂದ  ಮತ ಚಲಾಯಿಸಿ- ಸಚಿವ ಸಂತೋಷ್ ಲಾಡ್.

ಬೆಂಗಳೂರು,ಮಾರ್ಚ್,29,2024 (www.justkannada.in): ಲೋಕಸಭೆ ಚುನಾವಣೆಗೆ ನಿನ್ನೆಯಿಂದ 14 ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಈ ನಡುವೆ ಬಿಜೆಪಿ ವಿರುದ್ದ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್,  ಚುನಾವಣೆಯಲ್ಲಿ ಬಿಜೆಪಿಯವರು ಹಣ ಕೊಡ್ತಾರೆ. ನಾವೂ ಸಹ ಹಣ ಕೊಡ್ತೇವೆ. ಆದರೆ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಿ.  ಬಿಜೆಪಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ.  ಚುನಾವಣೆ ವೇಳೆ ಬಿಜೆಪಿಯವರು ರಾಮನ ಜಪ ಮಾಡುತ್ತಾರೆ ಎಂದು ಟೀಕಿಸಿದರು.ಚುನಾವಣೆ ಬಂದಾಗ ರಾಮನ ಜಪ santhosh lad

Key words: Vote, carefully, Santosh Lad