Wednesday, August 26, 2026

BDA Apartments

Home Front Page ಬಿಜೆಪಿಯಿಂದ ಜೆಡಿಎಸ್ ಮುಗಿಸುವ ಕೆಲಸ: ಹೆಚ್.ಡಿಕೆಗೆ ಈಗ ಅರಿವಾಗುತ್ತಿದೆ-ಸಚಿವ ದಿನೇಶ್ ಗುಂಡೂರಾವ್.

ಬಿಜೆಪಿಯಿಂದ ಜೆಡಿಎಸ್ ಮುಗಿಸುವ ಕೆಲಸ: ಹೆಚ್.ಡಿಕೆಗೆ ಈಗ ಅರಿವಾಗುತ್ತಿದೆ-ಸಚಿವ ದಿನೇಶ್ ಗುಂಡೂರಾವ್.

ಬೆಂಗಳೂರು,ಮಾರ್ಚ್,19,2024(www.justkannada.in): ಬಿಜೆಪಿ ಜೊತೆ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಅಸಮಾಧಾನ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯು ಜೆಡಿಎಸ್ ಮುಗಿಸುವ ಕೆಲಸ ಮಾಡುತ್ತಿದೆ. ಈಗ ಬಿಜೆಪಿಯವರ ಕೈಯಲ್ಲಿ ಜೆಡಿಎಸ್ ನವರು ಸಿಕ್ಕಿಹಾಕಿಕೊಂಡಿದ್ದಾರೆ.  ಹೊರಗೆ ಬರುವುದು ಕೂಡ ಈಗ ಜೆಡಿಎಸ್ ಗೆ ಕಷ್ಟವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ನವರು ಮಾತ್ರ ದೆಹಲಿಗೆ ಹೋಗಬೇಕು ಆದರೆ ಮೋದಿ ಬಂದಾಗ ವೇದಿಕೆಗೆ ಹೆಚ್.ಡಿಕೆಯನ್ನ  ಕರೆಯಲ್ಲ. ಕುಮಾರಸ್ವಾಮಿಗೆ ತಪ್ಪು ಈಗ ಅರಿವಾಗುತ್ತಿರುಬಹುದು ಆದ್ರೆ  ಬಹಳ ತಡವಾಗಿಬಟ್ಟಿದೆ ಎಂದು ದಿನೇಶ್ ಗುಂಡೂರಾವ್ ಟಾಂಗ್ ಕೊಟ್ಟರು.

Key words: finish- JDS – BJP-HDK – Minister -Dinesh Gundurao.