Saturday, August 22, 2026

BDA Apartments

Home Front Page ಇಂದಿನ ಮೋದಿ ಅವರ ಕಾರ್ಯಕ್ರಮಕ್ಕೆ ಗೈರಾಗುತ್ತೇನೆ-ಮಾಜಿ ಸಚಿವ ಕೆಎಸ್ ಈಶ್ವರಪ್ಪ.

ಇಂದಿನ ಮೋದಿ ಅವರ ಕಾರ್ಯಕ್ರಮಕ್ಕೆ ಗೈರಾಗುತ್ತೇನೆ-ಮಾಜಿ ಸಚಿವ ಕೆಎಸ್ ಈಶ್ವರಪ್ಪ.

ಶಿವಮೊಗ್ಗ,ಮಾರ್ಚ್,18,2024(www.justkannada.in):  ಪುತ್ರ ಕಾಂತೇಶ್ ರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಮಾಜಿ ಸಚಿವ .ಕೆಎಸ್ ಈಶ್ವರಪ್ಪ ಇದೀಗ ಇಂದು ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಗೈರಾಗುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೆ.ಎಸ್ ಈಶ್ವರಪ್ಪ,  ಇಂದು ನಡೆಯುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದೇನೆ. ದೇಶದ ಜನ ಮೋದಿಯನ್ನ ದೇವರು ಎಂದುಕೊಂಡಿದ್ದಾರೆ ಜನತೆಯ ಪರವಾಗಿ ದೇವರಿಗೆ ಸ್ವಾಗತ .  ನಮ್ಮ ಹೋರಾಟ ಕುಟುಂಬ ರಾಜಕಾರಣದ ವಿರುದ್ದ ಮಾತ್ರ. ಹಿಂದುತ್ವ ಕಾರ್ಯಕರ್ತರನ್ನ ತುಳಿಯವ ಕೆಲಸವಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್,  ಸಿಟಿ ರವಿ ಸೇರಿ ನನ್ನನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಾನು ಮೋದಿ ಹಿಂದುತ್ವ ಉಳಿಸಲು ಹೋರಾಡುತ್ತೇನೆ. ಶಿವಮೊಗ್ಗದಿಂದ ಗೆದ್ದು ಮೋದಿ ಬಳಿ ತೆರಳುತ್ತೇನೆ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: I will- miss Modi- program -today – Former minister- KS Eshwarappa