Saturday, August 8, 2026

BDA Apartments

Home Front Page ಚುನಾವಣೆಯಲ್ಲಿ ನಿಖಿಲ್ ರನ್ನು ಸೋಲಿಸಿದ್ದು ಕುಮಾರಸ್ವಾಮಿ- ಶಾಸಕ ಜಿ.ಟಿ ದೇವೇಗೌಡ.

ಚುನಾವಣೆಯಲ್ಲಿ ನಿಖಿಲ್ ರನ್ನು ಸೋಲಿಸಿದ್ದು ಕುಮಾರಸ್ವಾಮಿ- ಶಾಸಕ ಜಿ.ಟಿ ದೇವೇಗೌಡ.

ಮಂಡ್ಯ,ಮಾರ್ಚ್,15,2024(www.justkannada.in):  ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿದ್ದು ಹೆಚ್.ಡಿ ಕುಮಾರಸ್ವಾಮಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಚುನಾವಣಾ ಸಿದ್ದತಾ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಚುನಾವಣೆಯಲ್ಲಿ ನಿಖಿಲ್ ನನ್ನ ಸೋಲಿಸಿದ್ದು ಕಾಂಗ್ರೆಸ್ ನವರಲ್ಲ,  ಜೆಡಿಎಸ್ ನವರಲ್ಲ ಕುಮಾರಸ್ವಾಮಿ. ಅಂಬರೀಶ್ ಅವರ ಶವ ಮಂಡ್ಯಕ್ಕೆ ತೆಗೆದುಕೊಂಡು ಹೋಗೋದು ಬೇಡ ಎಂದು ಕುಟುಂಬಸ್ಥರು ಹೇಳಿದ್ರು.  ಆದ್ರೆ ಶವ ತೆಗೆದುಕೊಂಡು ಹೋಗಬೇಕು’ ಅಂದಿದ್ದು ಹೆಚ್ ಡಿ ಕುಮಾರಸ್ವಾಮಿ.   ಅಂಬರೀಶ್ ಗೆ ಸದ್ಗತಿ ಕೊಟ್ಟಿದ್ದು ಅಂದಿನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಂದು ಹೇಳಿದರು.   ಈ ರೀತಿ ಮಾತನಾಡದಂತೆ ಭಾಷಣದ ವೇಳೆ ಶಾಸಕ ಜಿ.ಟಿ ದೇವೇಗೌಡರಿಗೆ ಕಾರ್ಯಕರ್ತರ ಮನವಿ ಮಾಡಿದರು. ನಂತರ ಜಿಟಿ ದೇವೇಗೌಡರು ಅಂಬರೀಶ್ ಕುರಿತು ಭಾಷಣವನ್ನ ನಿಲ್ಲಿಸಿದರು.

Key words: Kumaraswamy- defeated -Nikhil – election- MLA GT Deve Gowda