Wednesday, August 12, 2026

BDA Apartments

Home Front Page ಸುಳ್ಳೇ ಬಿಜೆಪಿಯ ಮನೆದೇವರು: ಕೇಂದ್ರದ ಧೋರಣೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ- ಸಿಎಂ ಸಿದ್ದರಾಮಯ್ಯ.

ಸುಳ್ಳೇ ಬಿಜೆಪಿಯ ಮನೆದೇವರು: ಕೇಂದ್ರದ ಧೋರಣೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ- ಸಿಎಂ ಸಿದ್ದರಾಮಯ್ಯ.

ಚಿಕ್ಕಬಳ್ಳಾಪುರ,ಮಾರ್ಚ್,13,2024(www.justkannada.in): ಗ್ಯಾರಂಟಿ ಯೋಜನೆ ವಿಚಾರದಲ್ಲಿ ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡಿದ್ರು. ಸುಳ್ಳೇ ಬಿಜೆಪಿಯವರ ಮನೆ ದೇವರು ಮೋದಿ ಕೂಡ ಸುಳ್ಳು ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಕ್ಷೇತ್ರದಲ್ಲಿ ನಡೆದ ಗ್ಯಾರಂಟಿ ಫಲಾನುಭವಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ . ನಾವು ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.  ಗ್ಯಾರಂಟಿ ವಿಚಾರದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ನಾವು ಕೊಟ್ಟ ಮಾತಿನಂತೆ  ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಬಿಜೆಪಿ ನಾಯಕರ ಟೀಕೆಗೆ ತಲೆಕೆಡಿಸಿಕೊಂಡಿಲ್ಲ. ಕೇಂದ್ರ ಸರ್ಕಾರದ ಧೋರಣೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಎಂ.ಸಿ ಸುಧಾಕರ್ ಹಾಡಿ ಹೊಗಳಿದ ಸಿಎಂ.

ಇದೇ ವೇಳೆ ಸಚಿವ ಎಂ.ಸಿ ಸುಧಾಕರ್ ಹಾಡಿ ಹೊಗಳಿದ ಸಿಎಂ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವರು ಜನಪರ ಕಾಳಜಿ ಹೊಂದಿದ್ದಾರೆ.   ಕ್ರಿಯಾಶೀಲ ಜನಪರ ಕಾಳಜಿಯುಳ್ಳ ಶಾಸಕರನ್ನ ಆಯ್ಕೆ ಮಾಡಿದ್ದೀರಿ. ಸಚಿವ ಸುಧಾಕರ್ ಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಕ್ಷೇತ್ರದ ಬಗ್ಗೆ ಕಾಳಜಿ ಉಳ್ಳವರು ಉತ್ತಮ ನಾಯಕರಾಗಿ ಬೆಳೆಯುತ್ತಾರೆ.  ಈ ಎಲ್ಲಾ ಗುಣಗಳು ಸುಧಾಕರ್ ರಿಗೆ ಇದೆ ಎಂದು ಹೇಳಿದರು.

Key words: Chikkaballapur -Guarantee -convention- CM -Siddaramaiah.