Wednesday, August 12, 2026

BDA Apartments

Home Front Page ನಾನು ಅಷ್ಟಬೇಗ ಸಾಯಲ್ಲ ನಿಮ್ಮ ಜೊತೆ ಇರುತ್ತೇನೆ: ಜೆಡಿಎಸ್ ಪಕ್ಷ ಉಳಿಸಿ- ಹೆಚ್.ಡಿಕೆ ಭಾವುಕ.

ನಾನು ಅಷ್ಟಬೇಗ ಸಾಯಲ್ಲ ನಿಮ್ಮ ಜೊತೆ ಇರುತ್ತೇನೆ: ಜೆಡಿಎಸ್ ಪಕ್ಷ ಉಳಿಸಿ- ಹೆಚ್.ಡಿಕೆ ಭಾವುಕ.

ಹಾಸನ,ಮಾರ್ಚ್,13,2024(www.justkannada.in):  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಾಸನದಲ್ಲಿ ಇಂದು ಜೆಡಿಎಸ್ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ ಘಟನೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಅಷ್ಟಬೇಗ ಸಾಯಲ್ಲ ನಿಮ್ಮ ಜೊತೆ ಇರುತ್ತೇನೆ. ಭಗವಂತ ನನಗೆ ಅಯಸ್ಸು ಕೊಡುತ್ತಾನೆ. ಜೆಡಿಎಸ್​ ಪಕ್ಷ ಉಳಿಸಿ ಎಂದು ಭಾವುಕರಾಗಿ ನುಡಿದರು. ಹಾಸನದಿಂದ ಪ್ರಜ್ವಲ್​ ರೇವಣ್ಣ ಸ್ಪರ್ಧೆ ಮಾಡುತ್ತಾರೆ. ಪ್ರಜ್ವಲ್ ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ಅಂದುಕೊಳ್ಳಿ. ಕುಮಾರಸ್ವಾಮಿ ಅಭ್ಯರ್ಥಿ ಎಂದು ತಿಳಿದು ಮತಹಾಕಿ ಎಂದು ಹೇಳಿದರು.

ಮೈತ್ರಿ ಮಾಡಿಕೊಂಡಿರೋದು ಪಕ್ಷ ಮುಗಿಸಲು ಅಲ್ಲ.  ಪಕ್ಷ ಉಳಿಯಬೇಕು. ಆಸರೆ ಬೇಕು ಹಿಡಿದುಕೊಂಡಿದ್ದೇನೆ.  ಅವರು ಎಷ್ಟು ದಿನ ಪ್ರೀತಿ ತೋರುತ್ತಾರೋ ಅಷ್ಟೂ ದಿನ ಪ್ರೀತಿ ನಾವು ತೋರುತ್ತೇವೆ ಎಂದು ಹೆಚ್.ಡಿಕೆ ಹೇಳಿದರು.

Key words: Hassan-Save – JDS -party- HDK- emotional