Saturday, August 8, 2026

BDA Apartments

Home Front Page ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದು ಸುಳ್ಳು ಎಂದ್ರು ಶಾಸಕ ಶಾಮನೂರು ಶಿವಶಂಕರಪ್ಪ.

ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದು ಸುಳ್ಳು ಎಂದ್ರು ಶಾಸಕ ಶಾಮನೂರು ಶಿವಶಂಕರಪ್ಪ.

ದಾವಣಗೆರೆ, ಮಾರ್ಚ್,11,2024(www.justkannada.in): ರಾಜ್ಯಸಭೆ ಚುನಾವಣೆ ವೇಳೆ ಶಾಮನೂರು ಶಿವಶಂಕರಪ್ಪ ಅವರಿಗೆ ಬಿಜೆಪಿ 50 ಕೋಟಿ ರೂ. ಆಫರ್ ನೀಡಿದ್ದರು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಸ್ವತಃ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಮನೂರು ಶಿವಶಂಕರಪ್ಪ, ನನ್ನನ್ನ ಬಿಜೆಪಿಗೆ ಸೆಳೆಯಲು ಯಾರು ಬಂದಿಲ್ಲ. ಡಿಕೆ ಶಿವಕುಮಾರ್ ಹೇಳಿರುವುದು ಸುಳ್ಳು ಎಂದಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ ಮತಹಾಕಿ ಅಂತಾ ಕೇಳಿಕೊಂಡಿದ್ದರು.   ನಾವು ಒಪ್ಪಲಿಲ್ಲ.  ಬೇಕಿದ್ರೆ  ನಾವೇ ಹಣ ಕೊಡುತ್ತೇವೆ ಎಂದಿದ್ದವು. ಆದರೆ ಯಾರೂ ನಮ್ಮನ್ನ ಸೆಳೆದಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ.

Key words: BJP-Offer- MLA- Shamanur Shivashankarappa – DCM -DK Shivakumar – lie.