Friday, August 21, 2026

BDA Apartments

Home Front Page ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಹೈ ಅಲರ್ಟ್- ಸಚಿವ ರಾಮಲಿಂಗರೆಡ್ಡಿ.

ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಹೈ ಅಲರ್ಟ್- ಸಚಿವ ರಾಮಲಿಂಗರೆಡ್ಡಿ.

ದಾವಣಗೆರೆ,ಮಾರ್ಚ್,9,2024(www.justkannada.in):  ಬೆಳಗಾವಿಯ ನಿಪ್ಪಾಣಿಯಲ್ಲಿರುವ ಶ್ರೀರಾಮಮಂದಿರ ದೇವಾಲಯಕ್ಕೆ ಬಾಂಬ್ ಬೆದರಿಕೆ ಪತ್ರವನ್ನು ಕಳುಹಿಸಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಹೈ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಬೆಳಗಾವಿಯ ನಿಪ್ಪಾಣಿಯ ಶ್ರೀರಾಮಮಂದಿರ ದೇವಾಲಯವನ್ನು ಸ್ಪೋಟಿಸೋದಾಗಿ ಬಾಂಬ್ ಬೆದರಿಕೆ ಪತ್ರ ಬಂದಿದೆ. ಹೀಗಾಗಿ ದೇವಾಲಯಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿನೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳೋದಕ್ಕೆ ಮುಜರಾಯಿ ಇಲಾಖೆಯ ಎಂಡಿಗೆ ಸೂಚಿಸಿದ್ದೇನೆ. ಅವರು ಸೂಕ್ತ ಭದ್ರತೆ ಕುರಿತಂತೆ ಆದೇಶ ಮಾಡಲಿದ್ದಾರೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: High alert -all temples – state- Minister -Ramalingareddy.