Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಯತ್ನಾಳ್ ಗೆ ಬಸ್ ನಿಲ್ದಾಣದ ಬಳಿ ಕುಳಿತು ಜ್ಯೋತಿಷ್ಯ ಹೇಳೋಕೆ ಹೇಳಿ- ಸಚಿವ ಮಧು ಬಂಗಾರಪ್ಪ...

ಯತ್ನಾಳ್ ಗೆ ಬಸ್ ನಿಲ್ದಾಣದ ಬಳಿ ಕುಳಿತು ಜ್ಯೋತಿಷ್ಯ ಹೇಳೋಕೆ ಹೇಳಿ- ಸಚಿವ ಮಧು ಬಂಗಾರಪ್ಪ ವ್ಯಂಗ್ಯ.

ಕಲಬುರಗಿ, ಮಾರ್ಚ್​.8,2024(www.justkannada.in): ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಗೆ ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದ ಬಳಿ ಕುಳಿತು ಜ್ಯೋತಿಷ್ಯ ಹೇಳೋಕೆ ಹೇಳಿ ಎಂದು ವ್ಯಗ್ಯವಾಡಿದರು.

ಇದೇ ವೇಳೆ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ದವೂ ಕಿಡಿಕಾರಿದ ಸಚಿವ ಮಧು ಬಂಗಾರಪ್ಪ, ಅನಂತ್ ಕುಮಾರ್ ಹೆಗಡೆ ದೊಡ್ಡ ಹುಚ್ಚ, ಎಲೆಕ್ಷನ್ ಬರೋವರೆಗೂ ಮಲ್ಕೊಂಡಿರುತ್ತಾನೆ, ಎಲೆಕ್ಷನ್ ಬಂದ ತಕ್ಷಣ ಎದ್ದು ಬರ್ತಾನೆ. ಈ ಭಾರಿ ಆತನನ್ನ ರಾಜಕೀಯವಾಗಿ ಪರ್ಮನೆಂಟ್ ಆಗಿ ಮಲಗಿಸುತ್ತೇವೆ ಎಂದು ಕಿಡಿಕಾರಿದರು.ಯತ್ನಾಳ್ ಗೆ ಬಸ್ ನಿಲ್ದಾಣದ ಬಳಿ ಕುಳಿತು ಜ್ಯೋತಿಷ್ಯ ಹೇಳೋಕೆ ಹೇಳಿ- ಸಚಿವ ಮಧು ...

ಬಿಜೆಪಿ ಆಪರೇಷನ್ ಕಮಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಬಿಜೆಪಿಯವರ ಆಪರೇಷನ್ ನಾವು ಫೇಲ್ ಮಾಡ್ತೇವೆ. ಅವರು ಯಾವತ್ತೋ ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದಿಲ್ಲ. ಕಳೆದ ಭಾರಿ ಹೀಗ್ ಮಾಡಿಯೇ  67ಕ್ಕೆ ಬಂದಿದ್ದಾರೆ. ಮುಂದೆ ಹೀಗೆ ಮಾಡಿದ್ರೆ 37 ಕ್ಕೆ ಬರ್ತಾರೆ‌ ಎಂದು ಲೇವಡಿ ಮಾಡಿದರು.

Key words: Minister-Madhu Bangarappa-outrage- against-MLA-Basanagowda patil yatnal