Saturday, August 15, 2026

BDA Apartments

Home Front Page ಪಾಕ್ ಪರ ಘೋಷಣೆ ಕೇಸ್: ಮೊಹಮ್ಮದ್ ಶಫಿ ನಾಶಿಪುಡಿಗೆ 14 ದಿನ ನ್ಯಾಯಾಂಗ ಬಂಧನ.

ಪಾಕ್ ಪರ ಘೋಷಣೆ ಕೇಸ್: ಮೊಹಮ್ಮದ್ ಶಫಿ ನಾಶಿಪುಡಿಗೆ 14 ದಿನ ನ್ಯಾಯಾಂಗ ಬಂಧನ.

ಬೆಂಗಳೂರು,ಮಾರ್ಚ್,7,2023(www.justkannada.in): ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಶಫಿ ನಾಶಿಪುಡಿಗೆ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಪ್ರಕರಣ ಸಂಬಂಧ  ಬಂದಿತನಾಗಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್ ಶಫಿ ನಾಶಿಪುಡಿಯನ್ನು ಇದೀಗ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಕಳೆದ ಒಂದು ದಿನಗಳಿಂದ ನಾಶಿಪುಡಿ ಪೊಲೀಸ್ ಕಸ್ಟಡಿಯಲ್ಲಿದ್ದು,  ಇಂದು ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದರು ನಿನ್ನೆನಾಶಿಪುಡಿಯನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಪೊಲೀಸ್ ಕಸ್ಟಡಿಗೆ ನೀಡಿ ಅದೇಶಿಸಿತ್ತು.

Key words: Pro-Pak -declaration –case-Mohammad Shafi Nashipudi- 14 days.