Tuesday, August 25, 2026

BDA Apartments

Home Front Page ಮಂಗಳೂರು ಸ್ಪೋಟ ಪ್ರಕರಣಕ್ಕೂ, ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಸಾಮ್ಯತೆ ಇದೆ- ಡಿಸಿಎಂ ಡಿ.ಕೆ ಶಿವಕುಮಾರ್.

ಮಂಗಳೂರು ಸ್ಪೋಟ ಪ್ರಕರಣಕ್ಕೂ, ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಸಾಮ್ಯತೆ ಇದೆ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು, ಮಾರ್ಚ್​​,2,2024(www.justkannada.in):  ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೂ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೂ ಸಾಮ್ಯತೆ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಯಾರನ್ನೂ ರಕ್ಷಿಸಲ್ಲ. ಮಂಗಳೂರು ಕುಕ್ಕರ್​ ಬಾಂಬ್​​ ಸ್ಫೋಟ  ಪ್ರಕರಣಕ್ಕೂ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್​​​ ಸ್ಫೋಟ ಪಕ್ರರಣಕ್ಕೂ ಸಾಮ್ಯತೆ ಇದೆ. ಈ ಬಗ್ಗೆ ನಮ್ಮ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಆಯಾಮಗಳಲ್ಲೂ ಪ್ರಕರಣದ ತನಿಖೆ ಮಾಡುತ್ತಿದ್ದೇವೆ  ಎಂದು ತಿಳಿಸಿದರು.

ಬೆಂಗಳೂರಿನ ಜನ ಗಾಬರಿಯಾಗುವ ಆಗತ್ಯವಿಲ್ಲ ಸ್ಥಳೀಯವಾಗಿ ಬಾಂಬ್ ತಯಾರಿಸಿರುವ ಬಗ್ಗೆ ಮಾಹಿತಿ ಇದೆ.  ಯಾರನ್ನೂ ಕೂಡ ರಕ್ಷಣೆ ಮಾಡುವ ಮಾತೇ ಇಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Rameswaram cafe –bomb blast-case- DCM -DK Shivakumar.