Sunday, August 30, 2026

BDA Apartments

Home Front Page ಹುಣಸೂರು ಬೈ ಎಲೆಕ್ಷನ್: ಹರೀಶ್ ಗೌಡಗೆ ಮೊದಲ ಆದ್ಯತೆ: ಸೆ.21 ರಂದು ಜಿಟಿಡಿ ನೇತೃತ್ವದಲ್ಲಿ ಸಭೆ...

ಹುಣಸೂರು ಬೈ ಎಲೆಕ್ಷನ್: ಹರೀಶ್ ಗೌಡಗೆ ಮೊದಲ ಆದ್ಯತೆ: ಸೆ.21 ರಂದು ಜಿಟಿಡಿ ನೇತೃತ್ವದಲ್ಲಿ ಸಭೆ ಎಂದ ಮಾಜಿ ಸಚಿವ ಸಾ.ರಾ ಮಹೇಶ್…

ಮೈಸೂರು,ಸೆ,13,2019(www.justkannada.in):  ಹುಣಸೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ನಿಂದ  ಹರೀಶ್ ಗೌಡಗೆ  ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದರು.

ಹುಣಸೂರು ಉಪ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ  ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾ. ರಾ  ಮಹೇಶ್, ಈಗಾಗಲೇ ಹರೀಶ್ ಗೌಡರೇ ಸ್ಪರ್ದಿಸಿ ಎಂದು ಮಾತನಾಡಿದ್ದೇವೆ,  ನೋಡುವ ಅವರ ತೀರ್ಮಾನದ ನಂತರ ಯಾರನ್ನ ಆಯ್ಕೆ ಮಾಡಬೇಕೋ ಎಂದು ಚರ್ಚಿಸುತ್ತೇವೆ  ಎಂದರು.

ಸಭೆ  ಮಾಜಿ ಸಚಿವ ಜಿಟಿ ದೇವೇಗೌಡರ ನೇತೃತ್ವದಲ್ಲೇ ಸಭೆ

ನಿನ್ನೆ ನಡೆದದ್ದು ಮೈಸೂರು ನಗರ ಮಟ್ಟದ ಕಾರ್ಯಕರ್ತರ ಸಭೆ,  ಇದೇ  ತಿಂಗಳ 2l ಕ್ಕೆ  ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ.  ಪಕ್ಷ ಸಂಘಟನೆಯ ಹಿನ್ನೆಲೆ  ಜಿಲ್ಲಾ ಮಟ್ಟದ  ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ   ಭಾಗಿಯಾಗಲಿದ್ದಾರೆ,  ಅಲ್ಲದೆ ಜಿಲ್ಲೆಯ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದಂತೆ  ಎಲ್ಲಾ ಕಾರ್ಯಕರ್ತರು ಬರಲಿದ್ದಾರೆ. ಈ  ಸಭೆ  ಮಾಜಿ ಸಚಿವ ಜಿಟಿ ದೇವೇಗೌಡರ  ನೇತೃತ್ವದಲ್ಲೇ ನಡೆಯಲಿದೆ,  ಅವರನ್ನ ನಾವೇ ಸ್ವತಃ ಆಹ್ವಾನ ಮಾಡ್ತೇವೆ ಎಂದ ಸಾ.ರಾ ಮಹೇಶ್ ತಿಳಿಸಿದರು.

Key words: by- Elections  First priority -Harish Gowda-Former minister –SA.ra Mahesh