Thursday, August 27, 2026

BDA Apartments

Home Front Page ನಾಲ್ಕು ವರ್ಷಗಳ  ಪದವಿ ಕೋರ್ಸ್ ಗೆ ತೀವ್ರ ವಿರೋಧ: ಮೈಸೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ನಾಲ್ಕು ವರ್ಷಗಳ  ಪದವಿ ಕೋರ್ಸ್ ಗೆ ತೀವ್ರ ವಿರೋಧ: ಮೈಸೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು,ಫೆಬ್ರವರಿ,29,2024(www.justkannada.in): ನಾಲ್ಕು ವರ್ಷಗಳ  ಪದವಿ ಕೋರ್ಸ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿ  ಮೈಸೂರಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಬಳಿ  ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ನಾಲ್ಕು ವರ್ಷಗಳ  ಪದವಿ ಕೋರ್ಸ್ ಗೆ ವಿರೋಧ ವ್ಯಕ್ತಪಡಿಸಿದರು. ಮೂರು ವರ್ಷ ಇರುವ ಪದವಿ ಕೋರ್ಸ್ ಅನ್ನು ನಾಲ್ಕು ವರ್ಷ ಮಾಡಲು ಸರ್ಕಾರ ಮುಂದಾಗಿದ್ದು, ಸರ್ಕಾರದ ನೀತಿ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಹೊಸ ಶಿಕ್ಷಣ ನೀತಿ ಪ್ರಕಾರ ಪದವಿಗೆ  4 ವರ್ಷ ನಿಗದಿ ಮಾಡಲಾಗಿದೆ. ಆದರೆ  ಪದವಿಗೆ 4 ವರ್ಷಗಳ ಬೇಡ ಯಥಾಸ್ಥಿತಿ 3 ವರ್ಷ ಇರಲಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

Key words: opposition – four-year -degree -course- Students- protest – Mysore