Saturday, September 19, 2026

BDA Apartments

ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ವಿರೋಧ: ಸಭಾತ್ಯಾಗ ಮಾಡಿದ ಬಿಜೆಪಿ ಸದಸ್ಯರು BDA J...
Home Front Page ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ವಿರೋಧ: ಸಭಾತ್ಯಾಗ ಮಾಡಿದ ಬಿಜೆಪಿ ಸದಸ್ಯರು.

ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ವಿರೋಧ: ಸಭಾತ್ಯಾಗ ಮಾಡಿದ ಬಿಜೆಪಿ ಸದಸ್ಯರು.

ಬೆಂಗಳೂರು,ಫೆಬ್ರವರಿ,29,2024(www.justkannada.in):  ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಸಿಎಂ ಸಿದ್ದರಾಮಯ್ಯ, ನಮ್ಮ ಪಾಲಿನ ತೆರಿಗೆ ಹಂಚಿಕೆಯಲ್ಲಿ ಕೇಂದ್ರ  ಅನ್ಯಾಯ ಮಾಡುತ್ತಿದೆ. ನಮ್ಮ ನ್ಯಾಯಯುತ ಪಾಲನ್ನ ಕೇಂದ್ರ ನೀಡುತ್ತಿಲ್ಲ. ಹಿಂದೆ ಮೋದಿ ಗುಜರಾತ್ ಸಿಎಂ ಆಗಿದ್ದಾಗ ನಮ್ಮ ಪಾಲಿನ ತೆರಿಗೆ ಹಣ ನಮಗೆ ಕೊಡಿ ಎಂದಿದ್ದರು.  ಇಲ್ಲದಿದ್ದರೇ ನಾವು ತೆರಿಗೆ ಕೊಡಲ್ಲ ಎಂದಿದ್ದರು. ಈಗ ನಮ್ಮ ಪಾಲಿನ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗುತ್ತಿದೆ.  ದೇಶದಲ್ಲಿ ಅತಿಹೆಚ್ಚು ತೆರಿಗೆ ನೀಡುವ 2ನೇ ರಾಜ್ಯ ಕರ್ನಾಟಕ,  ಆದರೆ ನ್ಯಾಯಯುತ ಪಾಲು ನಮಗೆ ಸಿಗುತ್ತಿಲ್ಲ ಎಂದು ಕಿಡಿಕಾರಿದರು. ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ವಿರೋಧ siddaramaiah siddaramaiah 1

ಸಿಎಂ ಉತ್ತರಕ್ಕೆ ವಿರೋಧ ವ್ಯಕ್ತಪಡಿಸಿದ ವಿಪಕ್ಷ ಬಿಜೆಪಿ ಸದಸ್ಯರು, ಸರ್ಕಾರಕ್ಕೆ  ಧಿಕ್ಕಾರ ಕೂಗುತ್ತಲೇ ಸಭಾತ್ಯಾಗ ಮಾಡಿದರು.

ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, .  ನಿಮಗೆ ಸಭಾ ತ್ಯಾಗ ಮಾಡೋದು ಮಾತ್ರ ಗೊತ್ತು ನೀವು ಬಾವಿಗೆ ಬಿದ್ದೀದ್ದೀರಿ ನಡೀರಿ ಎಂದು ಟಾಂಗ್ ನೀಡಿದರು

Key words: Opposition – CM’s answer – budget: BJP- members –session