Sunday, September 20, 2026

BDA Apartments

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಪ್ಯಾಸೆಂಜರ್ ರೈಲು ಟಿಕೆಟ್ ...
Home Front Page ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಪ್ಯಾಸೆಂಜರ್ ರೈಲು ಟಿಕೆಟ್ ದರ ಅಗ್ಗ.

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಪ್ಯಾಸೆಂಜರ್ ರೈಲು ಟಿಕೆಟ್ ದರ ಅಗ್ಗ.

ಮೈಸೂರು,ಫೆಬ್ರವರಿ,28,2024(www.justkannada.in): ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದ್ದು ಇನ್ಮುಂದೆ ಪ್ಯಾಸೆಂಜರ್ ರೈಲು ಟಿಕೆಟ್ ದರ ಅಗ್ಗವಾಗಲಿದೆ.

ಹೌದು, ಕೋವಿಡ್ ವೇಳೆ ರದ್ದುಪಡಿಸಿದ್ದ ಆರ್ಡಿನರಿ ಕ್ಲಾಸ್ ದರವನ್ನು ಮರು ಜಾರಿಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಪ್ಯಾಸೆಂಜರ್, ಮೆಮು\ಡೆಮು ರೈಲುಗಳ ಪ್ರಯಾಣದರ ಶೇಕಡಾ 50% ರಷ್ಟು ಕಡಿಮೆಯಾಗಲಿದೆ.ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ rail

ಎಕ್ಸ್‌ ಪ್ರೆಸ್‌ ಸ್ಪೆಷಲ್ ಅಥವಾ ಮೆಮು\ಡೆಮು ಎಕ್ಸ್‌ ಪ್ರೆಸ್‌ ಗಳಾಗಿ ಪರಿವರ್ತಿಸಲಾಗಿದ್ದ ರೈಲುಗಳನ್ನು ಮೊದಲಿನಂತೆ ಸಾಮಾನ್ಯ ಪ್ಯಾಸೆಂಜರ್ ರೈಲುಗಳಾಗಿ ಓಡಿಸಲು ರೈಲ್ವೆ ಇಲಾಖೆ‌ ಮುಂದಾಗಿದೆ.  ಕೋವಿಡ್ ವೇಳೆ ಕನಿಷ್ಠ ಟಿಕೆಟ್ ದರವನ್ನು 10 ರೂಪಾಯಿಯಿಂದ 30 ರೂಪಾಯಿಗೆ ಏರಿಸಲಾಗಿತ್ತು.

Key words: Good news –railway- passengers-train- ticket -fares