Friday, September 18, 2026

BDA Apartments

Home Front Page ಡಿ.ಕೆ ಶಿವಕುಮಾರ್ ಮೇಲೆ ಹೆಚ್.ಡಿ ಕುಮಾರಸ್ವಾಮಿಗೆ ಪ್ರೀತಿ ಇಲ್ಲ: ಹೀಗಾಗಿ ನಿನ್ನೆಯ ಪ್ರತಿಭಟನೆಗೆ ಬಂದಿರಲಿಲ್ಲ- ಜೆಡಿಎಸ್...

ಡಿ.ಕೆ ಶಿವಕುಮಾರ್ ಮೇಲೆ ಹೆಚ್.ಡಿ ಕುಮಾರಸ್ವಾಮಿಗೆ ಪ್ರೀತಿ ಇಲ್ಲ: ಹೀಗಾಗಿ ನಿನ್ನೆಯ ಪ್ರತಿಭಟನೆಗೆ ಬಂದಿರಲಿಲ್ಲ- ಜೆಡಿಎಸ್ ಶಾಸಕ ಹೇಳಿಕೆ…

ತುಮಕೂರು, ಸೆ 12,2019(www.justkannada.in):  ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮೇಲೆ ಹೆಚ್.ಡಿ ಕುಮಾರಸ್ವಾಮಿಗೆ ಪ್ರೀತಿ ಇಲ್ಲ ಹೀಗಾಗಿ ನಿನ್ನೆ ನಡೆದ ಒಕ್ಕಲಿಗೆ ಸಮುದಾಯದ ಪ್ರತಿಭಟನೆಗೆ ಬಂದಿರಲಿಲ್ಲ ಎಂದು ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಎಸ್.ಆರ್ ಶ್ರೀನಿವಾಸ್,  ಕುಮಾರಸ್ವಾಮಿಯವರಿಗೆ, ಡಿಕೆಶಿ ಮೇಲೆ ಪ್ರೀತಿಯಿಲ್ಲ. ಇದ್ದರೆ ಪ್ರತಿಭಟನೆಗೆ ಬರುತ್ತಿದ್ದರು. ” ನಮಗೆಲ್ಲಾ ಡಿಕೆಶಿ ಮೇಲೆ ಪ್ರೀತಿ, ಅಭಿಮಾನವಿತ್ತು. ಹಾಗಾಗಿ ನೋವು ಪ್ರತಿಭಟನೆಗೆ ಹೋಗಿದ್ದೆವು.  ನಮಗೆ ಪ್ರತಿಭಟನೆಗೆ ಆಹ್ವಾನ ನೀಡಿರಲಿಲ್ಲ ಎಂದಿದ್ದಾರೆ. ನಮ್ಮ ಸಮುದಾಯದ ನಾಯಕನಿಗೆ ಅನ್ಯಾಯವಾದಾಗ ಪ್ರತಿಭಟನೆ ಮಾಡೋದು ನಮ್ಮ ಕರ್ತವ್ಯ. ಹೀಗಾಗಿ ಅದು ಅಮಂತ್ರಣ ಕೊಟ್ಟು ಕರೆಯುವ ಕಾರ್ಯಕ್ರಮ ಅಲ್ಲ. ಪ್ರತಿಭಟನೆಗೆ ಬಂದಿದ್ದ 30 ಸಾವಿರ ಮಂದಿಗೂ ಅಮಂತ್ರಣ ನೀಡಲಾಗಿತ್ತಾ ಎಂದು ಪ್ರಶ್ನಿಸಿದರು.

ಹಾಗೆಯೇ ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಸ್.ಆರ್ ಶ್ರೀನಿವಾಸ್, ಫೋನ್ ಕದ್ದಾಲಿಕೆ ಮಾಡಿದ್ದರೇ ಮಾಡಬಾರದನ್ನ ಮಾಡಿ ದುಡ್ಡು ಸಂಪಾದಿಸಿದ್ದರೇ ಅವರನ್ನೂ ಹಿಡಿದುಕೊಂಡು ಹೋಗುತ್ತಾರೆ ಎಂದು ನುಡಿದರು.

Key words: no love – HD Kumaraswamy – DK Sivakumar-tumakur-JDS MLA