Thursday, September 17, 2026

BDA Apartments

ಬ್ಯಾಂಕ್ ನಿಂದ ವಂಚನೆ ಆರೋಪ: ನೂರಾರು ರೈತರಿಂದ ಪ್ರತಿಭಟನೆ BDA JK_Adv BDA Adv
Home Crime ಬ್ಯಾಂಕ್ ನಿಂದ ವಂಚನೆ ಆರೋಪ: ನೂರಾರು ರೈತರಿಂದ ಪ್ರತಿಭಟನೆ.

ಬ್ಯಾಂಕ್ ನಿಂದ ವಂಚನೆ ಆರೋಪ: ನೂರಾರು ರೈತರಿಂದ ಪ್ರತಿಭಟನೆ.

ಮೈಸೂರು,ಫೆಬ್ರವರಿ,19,2024(www.justkannada.in): ನಗರದ ವಾಣಿವಿಲಾಸ ರಸ್ತೆಯಲ್ಲಿರುವ ಕರೂರು ವೈಶ್ಯ ಬ್ಯಾಂಕ್ ವಿರುದ್ದ ನೂರಾರು ರೈತರಿಗೆ  ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಇಂದು ಬ್ಯಾಂಕ್ ಎದುರು ರೈತರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಕರೂರು ವೈಶ್ಯ ಬ್ಯಾಂಕ್ ಎದುರು ನೂರಾರು ರೈತರು ಪ್ರತಿಭಟನಾ ಧರಣಿ ನಡೆಸಿದರು.

ನಂಜನಗೂಡು, ಎಚ್.ಡಿ ಕೋಟೆ ,ಹುಣಸೂರು ಮತ್ತು ಪಿರಿಯಾಪಟ್ಟಣ ಭಾಗದ 400 ಕ್ಕೂ ಹೆಚ್ಚು ರೈತರಿಗೆ ವಂಚನೆ ಮಾಡಿದೆ ಎನ್ನಲಾಗಿದೆ. 2 ಲಕ್ಷ ರೂ. ಸಾಲ ಕೊಟ್ಟು 4 ಲಕ್ಷ ವಸೂಲಿಗೆ ಬ್ಯಾಂಕ್ ಸಿಬ್ಬಂದಿ ಪಟ್ಟು ಹಿಡಿದಿದ್ದು, ಒಂದಕ್ಕೆ ಎರಡರಷ್ಟು ವಸೂಲಾತಿಗೆ ಬ್ಯಾಂಕ್ ಸಿಬ್ಬಂದಿ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.ಬ್ಯಾಂಕ್ ನಿಂದ ವಂಚನೆ ಆರೋಪ farmer farmer 1

ಬ್ಯಾಂಕ್ ಸಿಬ್ಬಂದಿಗಳ ವಂಚನೆಯಿಂದ ರೈತರಿಗೆ ಬಹಳ ತೊಂದರೆಯಾಗಿದ್ದು, ಬ್ಯಾಂಕ್ ಸಿಬ್ಬಂದಿಗಳು ಮಾಡಿರುವ ವಂಚನೆ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಬ್ಯಾಂಕ್ ಮೇಲೆ ಸೂಕ್ತ ಕಾನೂನು ಕೈಗೊಳ್ಳಬೇಕು ಎಂದು  ನೂರಾರು ರೈತರು ಆಗ್ರಹಿಸಿದ್ದಾರೆ.

Key words: Accused – fraud – bank-mysore-protest – farmers.