Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಜ.22 ರಂದು ರಾಮಮಂದಿರ ಉದ್ಘಾಟನೆ: ಗವಿಸಿದ್ಧೇಶ್ವರ ಸ್ಬಾಮೀಜಿಗೆ ಆಹ್ವಾನ.

ಜ.22 ರಂದು ರಾಮಮಂದಿರ ಉದ್ಘಾಟನೆ: ಗವಿಸಿದ್ಧೇಶ್ವರ ಸ್ಬಾಮೀಜಿಗೆ ಆಹ್ವಾನ.

ಕೊಪ್ಪಳ,ಜನವರಿ,6,2024(www.justkannada.in):  ಜನವರಿ 22ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ಬಾಮೀಜಿ ಅವರಿಗೆ ಆಹ್ವಾನ ನೀಡಲಾಗಿದೆ.

ವಿಶ್ವ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಗವಿಸಿದ್ಧೇಶ್ವರ ಸ್ಬಾಮೀಜಿಗೆ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ನೀಡಿದರು.

ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡುವಂತೆ ‌ನಮ್ಮ‌ ಸಂಘಟನೆಯ ವರಿಷ್ಠರು ತಿಳಿಸಿದ್ದಾರೆ. ದಯವಿಟ್ಟು ‌ಕಾರ್ಯಕ್ರಮಕ್ಕೆ ಬರಬೇಕು ಎಂದು ಸಂಘಟನೆ ಕಾರ್ಯಕರ್ತರು ಮನವಿ ಮಾಡಿದರು.ಜ.22 ರಂದು ರಾಮಮಂದಿರ ಉದ್ಘಾಟನೆ: ಗವಿಸಿದ್ಧೇಶ್ವರ ಸ್ಬಾಮೀಜಿಗೆ ಆಹ್ವಾನ gavi siddesear

ರಾಮಮಂದಿರ ಉದ್ಘಾಟನೆ ಮತ್ತು ಬಾಲ ರಾಮನ ಪ್ರತಿಷ್ಠಾಪನೆ ಹಿನ್ನೆಲೆ ಅಯೋಧ್ಯೆಯಿಂದ ಮಂತ್ರಾಕ್ಷತೆ ದೇಶದ ಎಲ್ಲ ರಾಜ್ಯಗಳಿಗೆ ತಲುಪಿವೆ. ಈ ಮಂತ್ರಾಕ್ಷತೆಗಳನ್ನು ಹಿಂದೂ ಸಂಘಟನೆಗಳು ದೇಶಾದ್ಯಂತ ವಿತರಣೆ ಮಾಡುತ್ತಿವೆ. ಹಿಂದೂ ಸಂಘಟನೆಗಳು ಮನೆ ಮನೆಗೂ ತೆರಳಿ ಮಂತ್ರಾಕ್ಷತೆಯನ್ನು ನೀಡುತ್ತಿವೆ.

Key words: Inauguration -Ram Mandir -Jan. 22- Invitation – Gavisiddheshwar Sbamiji