Saturday, September 12, 2026

BDA Apartments

ಹೈಕಮಾಂಡ್ ಮೆಚ್ಚಿಸಲು ಕರಸೇವಕರ ಬಂಧನ- ಸರ್ಕಾರದ ವಿರುದ್ದ ಆರ್.ಅಶೋಕ್ ಆರೋಪ BDA J...
Home Front Page ಹೈಕಮಾಂಡ್ ಮೆಚ್ಚಿಸಲು ಕರಸೇವಕರ ಬಂಧನ- ಸರ್ಕಾರದ ವಿರುದ್ದ ಆರ್.ಅಶೋಕ್ ಆರೋಪ.

ಹೈಕಮಾಂಡ್ ಮೆಚ್ಚಿಸಲು ಕರಸೇವಕರ ಬಂಧನ- ಸರ್ಕಾರದ ವಿರುದ್ದ ಆರ್.ಅಶೋಕ್ ಆರೋಪ.

ದಾವಣಗೆರೆ,ಜವನರಿ,3,2024(www.justkannada.in): ಹೈಕಮಾಂಡ್ ಮೆಚ್ಚಿಸಲು ಕರಸೇವಕರನ್ನ ಕಾಂಗ್ರೆಸ್ ಸರ್ಕಾರ ಬಂಧಿಸುತ್ತಿದೆ. ಸೋನಿಯಾ ಗಾಂಧಿ ಅವರನ್ನ ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ದಾವಣಗೆರೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, 30 ವರ್ಷದ ಬಳಿಕ  ಕರಸೇವಕರನ್ನ ಬಂಧಿಸಿದ್ದೇಕೆ..? ಹೈಕಮಾಂಡ್ ಮೆಚ್ಚಿಸಲು ಕರಸೇವಕರ ಬಂಧಿಸುತ್ತಿದ್ದಾರೆ.  ಪಿಎಫ್ ಐ ಕಾರ್ಯಕರ್ತರ ಕೇಸ್ ವಾಪಸ್ ಪಡೆಯುತ್ತೀರಾ. ಕೂಡಲೇ ಬಂಧಿತರನ್ನ ರಿಲೀಸ್ ಮಾಡಬೇಕು ಎಂದು ಆಗ್ರಹಿಸಿದರು. ಹೈಕಮಾಂಡ್ ಮೆಚ್ಚಿಸಲು ಕರಸೇವಕರ ಬಂಧನ ashok

ಸಿಎಂ ಬಿಜೆಪಿಯವರಿಗೆ ಕಾನೂನು ಗೊತ್ತಾ ಅಂತಾ  ಕೇಳ್ತಾರೆ. ಆದರೆ ನಾನೂ  ನಿಮಗೆ ಕಾನೂನು ಗೊತ್ತಾ ಅಂತಾ. ಸಿದ್ದರಾಮಯ್ಯ ಟಿಪ್ಪು ಸಿದ್ದಾಂತ ಹೇರುತ್ತಿದ್ದಾರೆ. ಹಿಂದೂ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ ಎಂದು ಆರ್.ಅಶೋಕ್ ತಿಳಿಸಿದರು.

Key words: Arrest – Karasevak – High Command- R. Ashok -allegation -Govt.