Friday, July 31, 2026

BDA Apartments

Home Front Page ಕೆಲವರ ಹಾಗೆ ನಾನು ಕತ್ತಲಲ್ಲಿ ಬಂದು ಡಿಕೆಶಿ ಭೇಟಿ ಮಾಡಿ ಹೋಗಲ್ಲ- ಶಾಸಕ ಎಸ್.ಟಿ ಸೋಮಶೇಖರ್.

ಕೆಲವರ ಹಾಗೆ ನಾನು ಕತ್ತಲಲ್ಲಿ ಬಂದು ಡಿಕೆಶಿ ಭೇಟಿ ಮಾಡಿ ಹೋಗಲ್ಲ- ಶಾಸಕ ಎಸ್.ಟಿ ಸೋಮಶೇಖರ್.

ಬೆಂಗಳೂರು,ಜನವರಿ,1,2024(www.justkannada.in):  ಕೆಲವರು ಡಿಕೆ ಶಿವಕುಮಾರ್ ರನ್ನ ಭೇಟಿ ಮಾಡಲು ರಾತ್ರಿ ವೇಳೆ ಬರ್ತಾರೆ.  ಆದರೆ ನಾನು ಹಗಲಿನಲ್ಲೇ ಬಂದು ಭೇಟಿ ಮಾಡುತ್ತೇನೆ ಎಂದು  ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ತಿಳಿಸಿದರು.

ಇಂದು  ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಟಿ ಸೋಮಶೇಖರ್,  ಹೊಸ ವರ್ಷದ ಶುಭಾಶಯ ಹೇಳಲು ಬಂದಿದ್ದೆ. ಇನ್ನೂ ಕೆಲವರು ಡಿಕೆಶಿ ಭೇಟಿಗೆ ರಾತ್ರಿ ಸಮಯದಲ್ಲಿ ಬರ್ತಾರೆ. ಎಲ್ಲರು ಕಣ್ಣು ತಪ್ಪಿಸಿ ಡಿಕೆಶಿ ಭೇಟಿ ಮಾಡುತ್ತಾರೆ. ಕೆಲವರ ಹಾಗೆ ನಾನು ಕತ್ತಲಲ್ಲಿ ಬಂದು ಹೋಗಲ್ಲ  ಎಂದರು.

ಡಿಕೆಶಿ ಭೇಟಿಗಾಗಿ ತುಂಬಾ ಜನ ಬರ್ತಾರೆ. ಆದರೆ ಬೇರೆಯವರನ್ನ ಗಮನಿಸದೇ ನಮ್ಮನ್ನ ಗಮನಿಸುತ್ತೀರಾ ಯಾಕೆ ..? ಎಂದು ಮಾಧ್ಯಮದವರಿಗೆ ಎಸ್.ಟಿ ಸೋಮಶೇಖರ್ ಪ್ರಶ್ನಿಸಿದರು.

Key words: DCM-DK Shivakumar- MLA -ST Somashekhar.