Friday, August 14, 2026

BDA Apartments

Home Front Page ಸಾಲು ಸಾಲು ರಜೆ ಹಿನ್ನಲೆ: ಬಂಡೀಪುರಕ್ಕೆ ಪ್ರವಾಸಿಗರ ದಂಡು: ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹ.

ಸಾಲು ಸಾಲು ರಜೆ ಹಿನ್ನಲೆ: ಬಂಡೀಪುರಕ್ಕೆ ಪ್ರವಾಸಿಗರ ದಂಡು: ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹ.

ಗುಂಡ್ಲುಪೇಟೆ, ಡಿಸೆಂಬರ್, 26, 2023(www.justkannada.in):  ಕಳೆದ ಮೂರು ದಿನಗಳಿಂದ ಸಾಲು ಸಾಲು ರಜೆ ಹಿನ್ನಲೆ  ಚಾಮರಾಜನಗರದ  ಬಂಡಿಪುರಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ.

ಶನಿವಾರ , ಭಾನುವಾರ,  ಕ್ರಿಸ್ಮಸ್ ರಜೆ ಸೋಮವಾರ ಮೂರು ದಿನಗಳ ನಿರಂತರ ರಜೆ ಹಿನ್ನಲೆ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ  ಹೆಚ್ಚಾಗಿದ್ದು, ಬಂಡಿಪುರ ಸಫಾರಿಯಲ್ಲಿ ಮೂರು ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ.

ಬಂಡೀಪುರ ಸಫಾರಿಯಿಂದ  ಮೂರು ದಿನಕ್ಕೆ 22 ಲಕ್ಷ ರೂ. ಆದಾಯ ಬಂದಿದ್ದು, ಮೂರು ದಿನಕ್ಕೆ 2,847 ಜನರು ಸಫಾರಿ ವೀಕ್ಷಣೆ ಮಾಡಿದ್ದಾರೆ ಎಂದು ಬಂಡೀಪುರ. ಸಿ.ಎಫ್. ಡಾ. ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Key words: Tourists –Bandipur-Record- revenue -collection.