Sunday, August 16, 2026

BDA Apartments

Home Front Page ಮಂಗಳೂರಿನಲ್ಲಿ ಕೋವಿಡ್ ಗೆ ಓರ್ವ ವ್ಯಕ್ತಿ ಬಲಿ.

ಮಂಗಳೂರಿನಲ್ಲಿ ಕೋವಿಡ್ ಗೆ ಓರ್ವ ವ್ಯಕ್ತಿ ಬಲಿ.

ಮಂಗಳೂರು,ಡಿಸೆಂಬರ್,22,2023(www.justkannada.in): ಮಂಗಳೂರಿನಲ್ಲಿ ಕೊರೋನಾ ಸೋಂಕು ತಗುಲಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಜ್ಯದಲ್ಲಿ ಕೋವಿಡ್ ಸೋಂಕು ಏರಿಕೆಯಾಗುತ್ತಿದ್ದು 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದೆ. ಈ ನಡುವೆ ಮಂಗಳೂರಿನಲ್ಲಿ ಕೊವೀಡ್‌ ಗೆ ತುತ್ತಾಗಿದ್ದ 40 ವರ್ಷದ ವ್ಯಕ್ತಿ ಸಾವನ್ನಪಿರುವುದಾಗಿ ತಿಳಿದು ಬಂದಿದೆ.

ಮೃತ ವ್ಯಕ್ತಿ ಉತ್ತರ ಭಾರತ ಮೂಲದವರಾಗಿದ್ದು ವಲಸೆ ಕಾರ್ಮಿಕರಾಗಿ ಮಂಗಳೂರಿಗೆ ಆಗಮಿಸಿದ್ದರು. ಕಳೆದ ಎರಡು ದಿನದ ಹಿಂದೆ ಕೋವಿಡ್ ಸೋಂಕು ತಗುಲಿತ್ತು.  ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಅಂತ ತಿಳಿದು ಬಂದಿದೆ.

Key words: One person -died – Covid – Mangalore.