Sunday, August 2, 2026

BDA Apartments

Home Crime ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಸಾಫ್ಟ್’ವೇರ್ ಉದ್ಯೋಗಿ

ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಸಾಫ್ಟ್’ವೇರ್ ಉದ್ಯೋಗಿ

ಕೋಲಾರ, ಸೆಪ್ಟೆಂಬರ್ 08, 2019 (www.justkannada.in):ಸಾಲ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತು ಸಾಫ್ಟ್’ವೇರ್ ಉದ್ಯೋಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ75ರ ಚುಂಚದೇನಹಳ್ಳಿ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಪ್ರಶಾಂತ್ ಕುಮಾರ್ ರಿವಲ್ವಾರ್ ನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸಾಪ್ಟ್ ವೇರ್ ಉದ್ಯೋಗಿ, ಬೆಂಗಳೂರಿನ ಮಹದೇವಪುರ ವಾಸಿಯಾಗಿದ್ದರು. ಮೃತ ಪ್ರಶಾಂತ್ ದಂಪತಿಗಳಿಬ್ಬರೂ ಸಾಫ್ಟ್’ವೇರ್ ಇಂಜಿನಿಯರ್ ಗಳು. ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.