Saturday, September 19, 2026

BDA Apartments

ಬೊಬ್ಬೆ ಹೊಡೆಯುತಿದ್ದ ಇಂಡಿಯಾ ಕೂಟಕ್ಕೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಾಠ: ಬ...
Home Front Page ಬೊಬ್ಬೆ ಹೊಡೆಯುತಿದ್ದ ಇಂಡಿಯಾ ಕೂಟಕ್ಕೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಾಠ: ಬಿ.ವೈ.ವಿಜಯೇಂದ್ರ

ಬೊಬ್ಬೆ ಹೊಡೆಯುತಿದ್ದ ಇಂಡಿಯಾ ಕೂಟಕ್ಕೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಾಠ: ಬಿ.ವೈ.ವಿಜಯೇಂದ್ರ

ಬೆಂಗಳೂರು, ಡಿಸೆಂಬರ್ 03, 2023 (www.justkannada.in): ಬೊಬ್ಬೆ ಹೊಡೆಯುತಿದ್ದ ಇಂಡಿಯಾ ಕೂಟಕ್ಕೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಕರ್ನಾಟಕದಲ್ಲಿ ಗ್ಯಾರೆಂಟಿ ಆಮಿಷ ಒಡ್ಡಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ ಇದರಿಂದ ರಾಜ್ಯದ ಜನ ಈಗ ಪಶ್ಚಾತ್ತಾಪ ಪಡ್ತಿದ್ದಾರೆ. ಆದರೆ ಮತ್ತೊಮ್ಮೆ ಬಿಜೆಪಿ ಅಲೆ ಎದ್ದಿದೆ ಅನ್ನೊದು ಗೋಚರವಾಗುತ್ತಿದೆ ಎಂದಿದ್ದಾರೆ.

ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಚುನಾವಣೆ ಮೂಲಕ ಜನ ಉತ್ತರ ಕೊಟ್ಟಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಸೆಮಿಫೈನಲ್ ಅಂತಾ ವ್ಯಾಖ್ಯಾನಿಸ್ತಿದ್ದರು. ಆದರೆ ಮತ್ತೊಮ್ಮೆ ಬಿಜೆಪಿ ಅಲೆ ಎದ್ದಿದೆ ಎನ್ನುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿಗೆ ಬಹಳ ನಿರೀಕ್ಷೆ ಇರಲಿಲ್ಲ. ಕರ್ನಾಟಕ ಬಿಜೆಪಿ ಫಲಿತಾಂಶ ಆ ರಾಜ್ಯದಲ್ಲಿ ಎಫೆಕ್ಟ್ ಆಗಿತ್ತು. ತೆಲಂಗಾಣದಲ್ಲಿ ಲೋಕಸಭೆ ಚುನಾವಣೆಯಲ್ಲಿ ಈ ಫಲಿತಾಂಶ ವರ್ಕ್ ಆಗಿಲ್ಲ ಎಂದಿದ್ದಾರೆ.