Friday, July 31, 2026

BDA Apartments

Home Cinema ‘ನನ್ನ ಪ್ರಕಾರ’ ಹಿಂದಿಗೆ ರೀಮೇಕ್: ಕಿಶೋರ್ ಪಾತ್ರದಲ್ಲಿ ಅಜಯ್ ದೇವಗನ್

‘ನನ್ನ ಪ್ರಕಾರ’ ಹಿಂದಿಗೆ ರೀಮೇಕ್: ಕಿಶೋರ್ ಪಾತ್ರದಲ್ಲಿ ಅಜಯ್ ದೇವಗನ್

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ‘ನನ್ನ ಪ್ರಕಾರ’ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ.

ಈ ನಡುವೆ ಇದೀಗ ‘ನನ್ನ ಪ್ರಕಾರ’ ಚಿತ್ರ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ.
ಸಸ್ಪನ್ಸ್ ಕ್ರೈಂ ಥ್ರಿಲ್ಲರ್ ಕಥೆಯನ್ನೊಳಗೊಂಡ ‘ನನ್ನ ಪ್ರಕಾರ’ ಚಿತ್ರ ಇದೀಗ ಹಿಂದಿಗೆ ರಿಮೇಕ್ ಆಗುತ್ತಿದೆ.

ಕನ್ನಡದಲ್ಲಿ ಕಿಶೋರ್, ಪ್ರಿಯಾಮಣಿ, ಮಯೂರಿ, ಅರ್ಜುನ್ ಯೋಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ನನ್ನ ಪ್ರಕಾರ’ ಚಿತ್ರದಲ್ಲಿನ ಕಿಶೋರ್ ಪಾತ್ರದಲ್ಲಿ ಬಾಲಿವುಡ್ ಅಜಯ್ ದೇವಗನ್ ನಟಿಸಲಿದ್ದಾರೆ ಎನ್ನಲಾಗಿದೆ.