Friday, August 28, 2026

BDA Apartments

Home Crime ಸಾಮಾಜಿಕ ಬಹಿಷ್ಕಾರ:  ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣು.

ಸಾಮಾಜಿಕ ಬಹಿಷ್ಕಾರ:  ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣು.

ಗುಂಡ್ಲುಪೇಟೆ,ಅಕ್ಟೋಬರ್,21,2023(www.justkannada.in):  ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವರಾಜು(40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕ್ಷುಲ್ಲುಕ ಕಾರಣಕ್ಕೆ ಗಲಾಟೆ, ಗಲಾಟೆ ವೇಳೆ ಚಪ್ಪಲಿ ಎಸೆದ ಎಂಬ ಕಾರಣಕ್ಕೆ ಸಮುದಾಯ ಮುಖಂಡರು ನ್ಯಾಯ ಪಂಚಾಯತಿ ಮೂಲಕ ದಂಡ ವಿಧಿಸಿ ಶಿವರಾಜು ಎಂಬವವರನ್ನ ಸಾಮಾಜಿಕ ಬಹಿಷ್ಕಾರ ಹಾಕಿದ್ದರು.

ಈ ಮಧ್ಯೆ  ದಂಡ ಕಟ್ಟಲು ಶಿವರಾಜು ನಿರಾಕರಿಸಿದ್ದು ಹೀಗಾಗಿ ಗ್ರಾಮದ ಯಜಮಾನರು ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಇದರಿಂದ ಮನನೊಂದು ಶಿವರಾಜು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಸಂಬಂಧ ಮೃತರ ಸಹೋದರ ಮಹೇಶ್  ಪೊಲೀಸ್ ಠಾಣೆಗೆ ದೂರು ನೀಡಿದ್ದು   ಬೇಗೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಸಾಮಾಜಿಕ ಬಹಿಷ್ಕಾರ ಹಾಕಿದ ಮುಖಂಡರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ ಮೃತರ ಸಂಬಂಧಿಕರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.  ಬಂಧಿಸುವವರೆಗೂ ಕಳೇಬರ ಪಡೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದು  ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೋಲಿಸರು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದರು.  ಬಳಿಕ  ಮೃತನ ಸಂಬಂಧಿಕರು ಪ್ರತಿಭಟನೆ  ಕೈಬಿಟ್ಟರು.

Key words: Social ostracism- desperate -man -commits -suicide.