Thursday, August 27, 2026

BDA Apartments

Home Front Page ಇಸ್ರೋದ ಗಗನಯಾನ ಯೋಜನೆಯ ಸುರಕ್ಷತಾ ಪ್ರಯೋಗ ಯಶಸ್ವಿ.

ಇಸ್ರೋದ ಗಗನಯಾನ ಯೋಜನೆಯ ಸುರಕ್ಷತಾ ಪ್ರಯೋಗ ಯಶಸ್ವಿ.

ಹೈದರಾಬಾದ್,ಅಕ್ಟೊಬರ್,21,2023(www.justkannada.in):  ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ, ಗಗನಯಾನ ಯೋಜನೆಯ  ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಸ್ರೋದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ಯಶಸ್ವಿಯಾಗಿದೆ.  ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್​ ಮಾಡೆಲ್​​ ಒಳಗೊಂಡ ರಾಕೆಟ್​ ನಭಕ್ಕೆ ಹಾರಿತ್ತು. ರಾಕೆಟ್​​ನಿಂದ ಬೇರ್ಪಟ್ಟು ಎರಡೂ ಮಾಡೆಲ್​ಗಳು ಪ್ಯಾರಚೂಟ್ ಮೂಲಕ ಭೂಮಿಗೆ ಬಂದಿಳಿದಿವೆ.

ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು  ಈ ಕುರಿತು ಮಾಹಿತಿ ನೀಡಿದ್ದು, ಟೆಸ್ಟ್ ವೆಹಿಕಲ್ ಲಿಫ್ಟ್ ಆಫ್ ಇಂದು ಯಶಸ್ವಿಯಾಗಿದ್ದು, ವಾಹನ ಸುರಕ್ಷಿತವಾಗಿದೆ. ನಿರೀಕ್ಷಿತ ಉಡಾವಣೆಯಾಗಿದೆ ಎಂದು ತಿಳಿಸಿದ್ದಾರೆ.

ಗಗನಯಾನ ಮಿಷನ್ನ ಪ್ರಾಥಮಿಕ ಗುರಿ ಮಾನವರನ್ನು ಬಾಹ್ಯಾಕಾಶಕ್ಕೆ ಉಡಾಯಿಸುವುದು, ಮೂರು ದಿನಗಳ ಕಾರ್ಯಾಚರಣೆಗಾಗಿ ಅವರನ್ನು 400 ಕಿಲೋಮೀಟರ್ ಎತ್ತರದಲ್ಲಿ ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸುವುದು, 2025 ರಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳುವುದು.

ಗಗನಯಾನ ಮಿಷನ್ನ ಸಿಬ್ಬಂದಿಯನ್ನು ಎಲ್ ವಿಎಂ 3 ರಾಕೆಟ್ ಬಳಸಿ ಗೊತ್ತುಪಡಿಸಿದ ಕಕ್ಷೆಗೆ ಸಾಗಿಸಲಾಗುವುದು. ಈ ರಾಕೆಟ್ ಘನ, ದ್ರವ ಮತ್ತು ಕ್ರಯೋಜೆನಿಕ್ ಪ್ರೊಪಲ್ಷನ್ ವ್ಯವಸ್ಥೆಗಳು ಸೇರಿದಂತೆ ವಿವಿಧ ಹಂತಗಳನ್ನು ಒಳಗೊಂಡಿದೆ.

Key words: Safety -trial – ISRO’s –aviation- project- successful.