Wednesday, August 19, 2026

BDA Apartments

Home Front Page ಮೈತ್ರಿ ವರಿಷ್ಠರ ಮಟ್ಟದಲ್ಲಿ ಆಗಿರುವ ನಿರ್ಣಯ: ಎಸ್.ಟಿ ಸೋಮಶೇಖರ್ ಹೇಳಿಕೆ ಪಕ್ಷ ವಿರೋಧಿಯಾಗುತ್ತೆ-ಅಶ್ವತ್ ನಾರಾಯಣ್.

ಮೈತ್ರಿ ವರಿಷ್ಠರ ಮಟ್ಟದಲ್ಲಿ ಆಗಿರುವ ನಿರ್ಣಯ: ಎಸ್.ಟಿ ಸೋಮಶೇಖರ್ ಹೇಳಿಕೆ ಪಕ್ಷ ವಿರೋಧಿಯಾಗುತ್ತೆ-ಅಶ್ವತ್ ನಾರಾಯಣ್.

ಬೆಂಗಳೂರು,ಅಕ್ಟೋಬರ್,6,2023(www.justkannada.in):  ಬಿಜೆಪಿ-ಜೆಡಿಎಸ್  ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಅಶ್ವಥ್ ನಾರಾಯಣ್, ಮೈತ್ರಿ  ವರಿಷ್ಠರ ಮಟ್ಟದಲ್ಲಿ ಆಗಿರುವ ನಿರ್ಣಯ. ಹೀಗಾಗಿ ಯಾರು ವೈಯಕ್ತಿಕ ಹೇಳಿಕೆ ಕೊಡಬಾರದು ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಅಶ್ವಥ್ ನಾರಾಯಣ್, ಮೈತ್ರಿ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಹೀಗಾಗಿ ಎಸ್ ಟಿ ಸೋಮಶೇಖರ್  ಹೇಳಿಕೆ ಪಕ್ಷ ವಿರೋಧಿಯಾಗುತ್ತದೆ. ವ್ಯತ್ಯಾಸಗಳು ಇದ್ದರೆ ಸಂಬಂಧಿಸಿದ ನಾಯಕರ ಜೊತೆ ಮಾತಾಡಬೇಕು. ಹಾಗಾಗಬಾರದಿತ್ತು ಹೀಗಾಗಬಾರದಿತ್ತು ಎನ್ನಲು ನಾವು ಪಕ್ಷಕ್ಕಿಂತ ದೊಡ್ಡವರಲ್ಲ. ಪಕ್ಷದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳು ನಿರ್ಣಯ ತೆಗೆದುಕೊಂಡಾಗ ಸಹಕರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

Key words: Decision – alliance –seniors- ST Somasekar- statement- Ashwath Narayan.