Wednesday, August 19, 2026

BDA Apartments

Home Front Page ಬಿಜೆಪಿ-ಜೆಡಿಎಸ್ ನದ್ದು ಅಪವಿತ್ರ ಮೈತ್ರಿ-ಸಿಎಂ ಸಿದ್ಧರಾಮಯ್ಯ ಟೀಕೆ.

ಬಿಜೆಪಿ-ಜೆಡಿಎಸ್ ನದ್ದು ಅಪವಿತ್ರ ಮೈತ್ರಿ-ಸಿಎಂ ಸಿದ್ಧರಾಮಯ್ಯ ಟೀಕೆ.

ಚಿತ್ರದುರ್ಗ,ಅಕ್ಟೋಬರ್,6,2023(www.justkannada.in): ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಂದಾಗಿರುವ ಕುರಿತು ಸಿಎಂ ಸಿದ್ಧರಾಮಯ್ಯ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಚಿತ್ರದುರ್ಗದಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ,  ಬಿಜೆಪಿ-ಜೆಡಿಎಸ್ ನದ್ದು ಅಪವಿತ್ರ ಮೈತ್ರಿ. ಜೆಡಿಎಸ್ ನವರು ಪಕ್ಷದ ಉಳುವಿಗಾಗಿ ಮೈತ್ರಿಗೆ ಮುಂದಾಗಿದ್ದಾರೆ.  ಜೆಡಿಎಸ್ ಉಳುವಿಗಾಗಿ ಸಿದ್ದಾಂತ ಗಾಳಿಗೆ ತೂರಿದ್ದಾರೆ.  ಜಾತ್ಯಾತೀತ ಎನ್ನುವ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಹಿಂದೆ ಬಿಜೆಪಿ ಆಡಳಿತದಲ್ಲಿ ರಾಜ್ಯದ  ಆರ್ಥಿಕ ಸ್ಥಿತಿ ಹಾಳಾಗಿತ್ತು. ಈಗ ನಮ್ಮ ಆಡಳಿತದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಸಿದ‍್ಧರಾಮಯ್ಯ ಹೇಳಿದರು.

Key words: CM Siddaramaiah- criticizes- BJP-JDS – alliance.