Sunday, August 9, 2026

BDA Apartments

Home Front Page ಅ.8ಕ್ಕೆ ಲಕ್ಷ್ಮೀಶ ಫೌಂಡೇಷನ್ ನಿಂದ ಬಾನ್ಸುರಿ ಸ್ವರ ಸಂಧ್ಯಾ ಕಾರ್ಯಕ್ರಮ.

ಅ.8ಕ್ಕೆ ಲಕ್ಷ್ಮೀಶ ಫೌಂಡೇಷನ್ ನಿಂದ ಬಾನ್ಸುರಿ ಸ್ವರ ಸಂಧ್ಯಾ ಕಾರ್ಯಕ್ರಮ.

ಬೆಂಗಳೂರು,ಅಕ್ಟೋಬರ್,2,2023(www.justkannada.in): ಕ್ಯಾನ್ಸರ್ ರೋಗಿಗಳು ಮತ್ತು ಅವರ ಕುಟುಂಬದವರ ಸಹಾಯಾರ್ಥವಾಗಿ ಲಕ್ಷ್ಮೀಶ ಫೌಂಡೇಷನ್ ವತಿಯಿಂದ ಅಕ್ಟೋಬರ್ 8ರ ಭಾನುವಾರ ಬಾನ್ಸುರಿ ಸ್ವರ ಸಂಧ್ಯಾ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಲಕ್ಷ್ಮೀಶ ಫೌಂಡೇಶನ್ ನ 3ನೇ ಸಂಸ್ಥಾಪನಾ ದಿನದ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ 4 ಗಂಟೆಗೆ ಬಸವನಗುಡಿಯ ಕೆ.ಆರ್ ಎಸ್ ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ಪಂಡಿತ್ ಡಾ. ಪ್ರವೀಣ್ ಗೋಡ್ಕಂಡಿ ಜತೆಗೆ ಅವರ ಕೃಷ್ಣ ಫ್ಯೂಷನ್ ತಂಡದಿಂತ ಬಾನ್ಸುರಿ ಸ್ವರ ಸಂಧ್ಯಾ ನಡೆಯಲಿದೆ ಎಂದು ಫೌಂಡೇಷನ್ ತಿಳಿಸಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರಸೂತಿ ತಜ್ಞೆ ಡಾ.ಸುನಂದಾ ಆರ್. ಕುಲಕರ್ಣಿ, ಹಿರಿಯ ಪತ್ರಕರ್ತ ಮುಂಜಾನೆ ಸತ್ಯ, ಕಲಾವಿದ ಸಿಹಿಕಹಿ ಚಂದ್ರು ಪಾಲ್ಗೊಳ್ಳಲಿದ್ದಾರೆ. ಚಾರಿಟೆಬಲ್ ಟ್ರಸ್ಟ್ ಆಗಿರುವ ಲಕ್ಷ್ಮೀಶ ಫೌಂಡೇಷನ್ ಕ್ಯಾನ್ಸರ್ ರೋಗಿಗಳು ಮತ್ತು ಅವರ ಹತ್ತಿರದ ಸಂಬಂಧಿಗಳೀಗೆ ಕೌನ್ಸಿಲಿಂಗ್ ನೀಡುವ ಹಾಗೂ ಬಡ ಕ್ಯಾನ್ಸರ್ ರೋಗಿಗಳ ಮಕ್ಕಳಿಗೆ ಶಿಕ್ಷಣಕ್ಕಾಗಿ ನೆರವು ನೀಡುವ ಕೆಲಸ ಮಾಡುತ್ತಿದೆ. ಈ ಸಹಾಯಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ ಹೆಚ್ಚಿನ ಮಾಹಿತಿಗೆ 9448069898 ಸಂಖ್ಯೆ ಸಂಪರ್ಕಿಸುವಂತೆ ಕೋರಲಾಗಿದೆ.

Key words: Bansuri Swara- Sandhya -program -Lakshmish Foundation –October 8