Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಮೈಸೂರಿನಲ್ಲಿ ಸ್ವಚ್ಛತಾ ಆಂದೋಲನಕ್ಕೆ ಎಡಿಸಿ ಚಾಲನೆ

ಮೈಸೂರಿನಲ್ಲಿ ಸ್ವಚ್ಛತಾ ಆಂದೋಲನಕ್ಕೆ ಎಡಿಸಿ ಚಾಲನೆ

ಮೈಸೂರು, ಅಕ್ಟೋಬರ್ 01, 2023 (www.justkannada.in): ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಸ್ವಚ್ಛತಾ ಆಂದೋಲಕ್ಕೆ ಅಪರ  ಜಿಲ್ಲಾಧಿಕಾರಿ ಪಿ. ಶಿವರಾಜು ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಪ್ರಾಂಗಣದಲ್ಲಿ ಶ್ರಮದಾನ ಮಾಡಲಾಯಿತು. ನಂತರ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕಛೇರಿಗಳಲ್ಲಿ  ಸ್ವಚ್ಛತೆ ಕಾಪಾಡಿ  ಸಾರ್ವಜನಿಕರಿಗೆ  ಅರಿವು ಮೂಡಿಸಲಿ ಎನ್ನುವ ಉದ್ದೇಶದೊಂದಿಗೆ ಶ್ರಮದಾನ ಮಾಡುತ್ತಿದ್ದೇವೆ ಎಂದರು.

ನಮ್ಮ ಮನೆ, ಕಛೇರಿ ಸುತ್ತಮುತ್ತ ಪರಿಸರವನ್ನ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ನಮ್ಮ ಪರಿಸರ ಸ್ವಚ್ಚವಾಗಿಟ್ಟುಕೊಂಡರೆ ಇಡಿ ಜಗತ್ತೆ ಸ್ವಚ್ಚವಾಗುತ್ತದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ‌ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.