Saturday, August 22, 2026

BDA Apartments

Home Front Page ಕಾವೇರಿ ವಿಚಾರದಲ್ಲಿ ಅನ್ಯಾಯ: ದೆಹಲಿಯಲ್ಲಿ ಹೋರಾಟ ಮಾಡಿ ನಮ್ಮ ಹಕ್ಕು ಕೇಳ್ತೇವೆ- ಬಡಗಲಪುರ ನಾಗೇಂದ್ರ.

ಕಾವೇರಿ ವಿಚಾರದಲ್ಲಿ ಅನ್ಯಾಯ: ದೆಹಲಿಯಲ್ಲಿ ಹೋರಾಟ ಮಾಡಿ ನಮ್ಮ ಹಕ್ಕು ಕೇಳ್ತೇವೆ- ಬಡಗಲಪುರ ನಾಗೇಂದ್ರ.

ಮೈಸೂರು,ಸೆಪ್ಟಂಬರ್,30,2023(www.justkannada.in): ಕಾವೇರಿ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ. ಹೀಗಾಗಿ ದೆಹಲಿಯಲ್ಲಿ ಹೋರಾಟ ಮಾಡಿ ನಮ್ಮ ಹಕ್ಕು ಕೇಳ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಬಡಗಲಪುರ ನಾಗೇಂದ್ರ, ನಾವು ಡೆಲ್ಲಿಯಲ್ಲಿ ಹೋರಾಟ ಮಾಡ್ತೀವಿ. ಜಂತರ್ ಮಂತರ್ ನಲ್ಲಿ ನಮ್ಮ ಹಕ್ಕನ್ನು ಕೇಳುತ್ತೇವೆ. ಕಾವೇರಿ ವಿಚಾರದಲ್ಲಿ ನಮಗೆ ಅನ್ಯಾಯವಾಗಿದ್ದು, ಸಿಎಂ ಸಿದ್ದರಾಮಯ್ಯ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು. ಉದ್ದೇಶ ಪೂರ್ವಕವಾಗಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ರೆ ಅದು ತಪ್ಪು. ಪಾಲಿಸಲಾಗದ ಆದೇಶ ಉಲ್ಲಂಘನೆ ಮಾಡಿದ್ರೆ ಅದು ತಪ್ಪಲ್ಲ. ಆದೇಶ ಉಲ್ಲಂಘನೆ ಮಾಡಿದ್ರೆ ಜಲಾಶಯದ ಕೀ ಕಿತ್ತುಕೊಳ್ಳುವ ಭಯ ನಿಮಗಿದೆ ಅನಿಸುತ್ತೆ. ನಿಮ್ಮಿಂದ ಕಿತ್ತು ಕೊಳ್ಳಬಹುದು ಆದರೆ ರೈತರಿಂದಲ್ಲ. ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಈ ಬಗ್ಗೆ ಯೋಚನೆ ಮಾಡಬೇಕು ಎಂದು ಸಲಹೆ ನೀಡಿದರು.

9 ಜನ ಎಂಪಿಗಳೂ ಬೀದಿಗಿಳಿದು ಜನರ ಪರ ನಿಲ್ಲಬೇಕು.

ಕೇಂದ್ರ ಸರ್ಕಾರ ಈ ಕೂಡಲೇ ಕಾವೇರಿ ವಿಚಾರಕ್ಕೆ ಮಧ್ಯ ಪ್ರವೇಶಿಸಬೇಕು. ಕಾವೇರಿ ಕೊಳ್ಳದ 9 ಎಂಪಿಗಳು ಮೋದಿ ಭೇಟಿಗೆ ಮಾಡಿ ವಿನಂತಿ ಮಾಡಬೇಕು. 9 ಜನ ಎಂಪಿಗಳೂ ಬೀದಿಗಿಳಿದು ಜನರ ಪರ ನಿಲ್ಲಬೇಕು. ಈ ಭಾಗದ 50ಕ್ಕು ಹೆಚ್ಚು ಎಂ.ಎಲ್. ಎ ಗಳು ಕೂಡ ಬೀದಿಗೆ ಇಳಿಯಬೇಕು. ಇಲ್ಲದಿದ್ದರೆ ನಿಮ್ಮನ್ನು  ಮನೆಯಿಂದ ನಾವೇ ಎಳೆ ತರುವ ಕೆಲಸ ಮಾಡುತ್ತೇವೆ. ನಮ್ಮದು ಒಕ್ಕೂಟ ವ್ಯವಸ್ಥೆ  ಎರಡು ರಾಜ್ಯಗಳ ನಡುವೆ ಕಂದಕ ಉಂಟಾದಾಗ ಕೇಂದ್ರ ಮದ್ಯೆ ಬರಬೇಕು. ಇಲ್ಲದಿದ್ದರೆ ಒಕ್ಕೂಟದ ವಿರುದ್ಧ ಅಪಸ್ವರ ಬರತ್ತೆ. ಎಲ್ಲವನ್ನೂ ಮನಗೊಂಡು ತೀರ್ಮಾನ ಮಾಡಬೇಕು ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ನಮ್ಮ ಎಂಪಿಗಳು ನರ ಸತ್ತ ಎಂಪಿಗಳು. ನಿಮ್ಮನ್ನು ಆಯ್ಕೆ ಮಾಡಿದ್ದು ನಮ್ಮ ಪರ ಕೆಲಸ ಮಾಡಲಿ ಅಂತ. ಮನೇಲಿ ಕೂತು ಬಿಟ್ಟಿ ಭೋದನೆ ಮಾಡಲಿ ಅಂತಲ್ಲ. ನೀವು ಬಂದು ನಮ್ಮ ಪರ ನಿಲ್ಲಬೇಕು. ಬೀದಿಗಿಳಿದು ರಾಜ್ಯದ ಜನರ ಪರ ಹೋರಾಟ ಮಾಡಬೇಕು. ರಾಜ್ಯದ ಬಿಜೆಪಿ ಎಂಪಿಗಳು ಮೋದಿ ಮುಂದೆ ತುಟಿ ಬಿಚ್ಚಲ್ಲ. ಇವರನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪು ಎಂದು ಬಡಗಲಪುರ ನಾಗೇಂದ್ರ ಕಿಡಿಕಾರಿದರು.

Key words: Injustice – Cauvery –issue- fight -Delhi -Badagalpura Nagendra