Sunday, August 30, 2026

BDA Apartments

Home Front Page ಮೈತ್ರಿ ಬಗ್ಗೆ ಸ್ವಲ್ಪ ದಿನ ಕಾದು ನೋಡಿ ಏನಾಗಲಿದೆ ಅಂತ ಗೊತ್ತಾಗುತ್ತೆ- ಸಚಿವ ಚಲುವರಾಯಸ್ವಾಮಿ.

ಮೈತ್ರಿ ಬಗ್ಗೆ ಸ್ವಲ್ಪ ದಿನ ಕಾದು ನೋಡಿ ಏನಾಗಲಿದೆ ಅಂತ ಗೊತ್ತಾಗುತ್ತೆ- ಸಚಿವ ಚಲುವರಾಯಸ್ವಾಮಿ.

 ಬೆಂಗಳೂರು,ಸೆಪ್ಟಂಬರ್,14,2023(www.justkannada.in):  ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಸದ್ದು ಮಾಡುತ್ತಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ  ಕೃಷಿ ಸಚಿವ ಚಲುವರಾಯಸ್ವಾಮಿ,  ಮೈತ್ರಿ ಬಗ್ಗೆ ಸ್ವಲ್ಪ ದಿನ ಕಾದು ನೋಡಿ ಏನಾಗಲಿದೆ ಅಂತ ಗೊತ್ತಾಗುತ್ತದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ,  ಬ್ರದರ್ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರೇ ಮೈತ್ರಿ ಅಂತಿರೋರು. ಬಿಜೆಪಿ  ಮತ್ತು ಜೆಡಿಎಸ್ ಎರಡೂ ಕಡೆ ಅಸಮಾಧಾನ ಸ್ಪೋಟವಾಗಿದೆ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಭಿನ್ನರಾಗ ತೆಗೆದಿದ್ದಾರೆ.  ಹೀಗಾಗಿ ಸ್ವಲ್ಪ ದಿನ ಕಾದು ನೋಡಿ ಏನಾಗಲಿದೆ ಅಂತಾ ಗೊತ್ತಾಗುತ್ತದೆ ಎಂದು ತಿಳಿಸಿದರು.

Key words: alliance-Wait – few days and see – happen – Minister -Chaluvarayaswamy.