Friday, October 16, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಮಾಜಿ ಸಚಿವ ಡಿಕೆ ಶಿವಕುಮಾರ್  ಭೇಟಿ ಮಾಡಿ ಧೈರ್ಯ ತುಂಬಿದ ಕಾಂಗ್ರೆಸ್ ಮುಖಂಡರು…

ಮಾಜಿ ಸಚಿವ ಡಿಕೆ ಶಿವಕುಮಾರ್  ಭೇಟಿ ಮಾಡಿ ಧೈರ್ಯ ತುಂಬಿದ ಕಾಂಗ್ರೆಸ್ ಮುಖಂಡರು…

ನವದೆಹಲಿ,ಸೆ,1,2019(www.justkannada.in):  ಇಡಿ ಸಮನ್ಸ್ ಹಿನ್ನೆಲೆ ವಿಚಾರಣೆಗಾಗಿ ನವದೆಹಲಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಧೈರ್ಯ ತುಂಬಿದರು.

ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಬಾಲಕೃಷ್ಣ ಸೇರಿ ಹಲವು ಕಾಂಗ್ರೆಸ್ ಮುಖಂಡರು ನವದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ಚರ್ಚಿಸಿದರು. ಈ ವೇಳೆ ಡಿ.ಕೆ ಶಿವಕುಮಾರ್ ಗೆ ಧೈರ್ಯ ಹೇಳಿದರು.

ಭೇಟಿ ಬಳಿಕ ಮಾತನಾಡಿದ ಕೈ ಮುಖಂಡ ಚಲುವರಾಯಸ್ವಾಮಿ,ರಾಜಕೀಯ ದುರುದ್ಧೇಶದಿಂದ ಡಿ.ಕೆ ಶಿವಕುಮಾರ್ ಅವರ ಮೇಲೆ ಕೇಸ್ ಹಾಕಲಾಗಿದೆ.ಗುಜರಾತ್ ಶಾಸಕರನ್ನ ರಕ್ಷಣೆ ಮಾಡಿದ್ದಕ್ಕೆ ಡಿ.ಕೆ ಶಿವಕುಮಾರ್ ಅವರನ್ನ  ಬಿಜೆಪಿ ಟಾರ್ಗೆಟ್ ಮಾಡಿದೆ. ಶ್ರೀರಾಮುಲು, ಗೋವಿಂದ ಕಾರಜೋಳ ಹೇಳಿಕೆಯನ್ನ ಗಮನಿಸಿದರೇ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಹಾಗೆಯೇ ಡಿ.ಕೆ ಶಿವಕುಮಾರ್ ಧೈರ್ಯವಾಗಿದ್ದಾರೆ. ಎಲ್ಲವನ್ನೂ ಎದರಿಸುತ್ತಾರೆ.  ಕಾನೂನು ಹೋರಾಟ ಮಾಡುತ್ತಾರೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ತಿಳಿಸಿದರು.

Key words: Former minister- DK Sivakumar -met – Congress –leaders- New Delhi