Tuesday, August 11, 2026

BDA Apartments

Home Front Page ಉದ್ಯಮಿ ಅದಾನಿ, ಅಂಬಾನಿ ಸಾಲಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ? ಪ್ರಧಾನಿ ಮೋದಿಗೆ ಸಚಿವ ಹೆಚ್.ಸಿ...

ಉದ್ಯಮಿ ಅದಾನಿ, ಅಂಬಾನಿ ಸಾಲಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ? ಪ್ರಧಾನಿ ಮೋದಿಗೆ ಸಚಿವ ಹೆಚ್.ಸಿ ಮಹದೇವಪ್ಪ ಟಾಂಗ್.

ದಾವಣಗೆರೆ,ಸೆಪ್ಟಂಬರ್,4,2023(www.justkannada.in): ಉಚಿತ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತೆ ಎಂಬ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ  ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ,  ಉದ್ಯಮಿ ಅದಾನಿ, ಅಂಬಾನಿ ಸಾಲಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ? ಎಂದು ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಯೋಜನೆ 1.32 ಕೋಟಿ ಬಡವರಿಗೆ ತಲುಪುತ್ತಿದೆ. ಇದರಿಂದ ಬಡವರು ಆರ್ಥಿಕವಾಗಿ ಸಬಲೀಕರಣ ಆಗ್ತಿದ್ದಾರೆ. ಅವರೇನು ಎಮ್ಮೆಯ ಸೆಗಣಿ ತೆಗೆದಿದ್ದಾರಾ? ದನ ಮೇಯಿಸಿದ್ದಾರಾ? ಇದೆಲ್ಲ ಮಾಡುವವರು ನಾವು. ಬಿಜೆಪಿಯವರು ಸುಮ್ಮನೇ ಭಾವನಾತ್ಮಕವಾಗಿ ಮಾತನಾಡ್ತಾರೆ ಅಷ್ಟೇ. ಬಿಜೆಪಿಯವರಿಗೆ ಬಡವರ ಪರವಾಗಿ ಕೆಲಸ ಮಾಡೋದು ಗೊತ್ತಿಲ್ಲ  ಎಂದು ಹೆಚ್.ಸಿ ಮಹದೇವಪ್ಪ ವಾಗ್ದಾಳಿ ನಡೆಸಿದರು.

Key words: Adani- Ambani – money-  bankrupt-Minister -HC Mahadevappa –PM- Modi.