ಗಣೇಶನ ಕೂರಿಸುವುದು ಮುಖ್ಯವಲ್ಲ: ಹಬ್ಬವನ್ನ ಹಬ್ಬದ ರೀತಿಯಲ್ಲಿ ಮಾಡಿ- ಮೈಸೂರಿನಲ್ಲಿ ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ಮನವಿ‌…

ಮೈಸೂರು,ಆ,31,2019(www.justkannada.in): ಗಣೇಶನ ಕೂರಿಸುವುದು ಮುಖ್ಯವಲ್ಲ: ಹಬ್ಬವನ್ನ ಹಬ್ಬದ ರೀತಿಯಲ್ಲಿ ಮಾಡಿ. ಗಣೇಶ ಪ್ರತಿಷ್ಠಾಪನೆ ಮಾಡಿವುದರ ಜೊತೆಗೆ ಶಿಷ್ಟಾಚಾರ ಪಾಲಿಸಿ ಎಂದು ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ಮನವಿ‌ ಮಾಡಿಕೊಂಡರು.

ಮೊಹರಂ ಹಾಗೂ ಗಣಪತಿ ಹಬ್ಬ ಹಿನ್ನಲೆ ಮೈಸೂರಿನಲ್ಲಿ ಪೋಲಿಸ್ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಸಾಮೂಹಿಕ ಮೂರ್ತಿ ವಿಸರ್ಜನೆ ಕುರಿತು ನಗರದ ಪೊಲೀಸ್ ಭವನದಲ್ಲಿ ಉಪ ಪೋಲಿಸ್ ಆಯುಕ್ತ ಮುತ್ತುರಾಜ್ ನೇತೃತ್ವದಲ್ಲಿ ಸರ್ವಧರ್ಮ ಮುಖಂಡರ ಸಭೆ ನಡೆಯಿತು

ಮೊರಂ ಹಾಗೂ ಗಣಪತಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಗದ್ದಲಗಳು ಸಂಭವಿಸುತ್ತದೆ. ಕೆಲವು ವಾರ್ಡ್  ಗಳಲ್ಲಿ ಚಿಕ್ಕ ಮಕ್ಕಳು ಸಹ ಗಣಪತಿ ಕೂರಿಸುತ್ತಾರೆ. ಅವರಿಗೂ ಸಹ ಪಾಲಿಕೆಯ ನಿಯಮಗಳು ಅನ್ವಯವಾಗುತ್ತೆ ಎಂದು ಹೇಳಲಾಗುತ್ತೆ. ಕೆಲವು ನಿಯಮಗಳನ್ನು ಕೊಂಚ ಸಡಲಿ ಮಾಡಿಕೊಡಿ. ಕೆಲವು ಸ್ಥಳಗಳಲ್ಲಿ ದೊಡ್ಡ ದೊಡ್ಡ ಧ್ವನಿ ವರ್ಧಕಗಳನ್ನ ಅಳವಡಿಸಿ ಕಿರಿಕಿರಿ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಹಣಕ್ಕಾಗಿ ಒತ್ತಡವನ್ನ ಹೇರುತ್ತಾರೆ ಅವರ ಬಗ್ಗೆ ಸ್ವಲ್ಪ ಗಮನ ಹರಿಸಿ ಎಂದು ಮುಖಂಡರು ಪೊಲೀಸರಿಗೆ ಮನವಿ ಮಾಡಿದರು.

ಮುಸ್ಲಿಂರಿಗೆ ಮೊಹರಂ ಹೊಸ ವರ್ಷ ಇದ್ದಂತೆ. ಈ ಸಂದರ್ಭದಲ್ಲಿ ಕೆಲವು ಮೆರವಣಿಗರಗಳನ್ನು ಮಾಡಲಾಗುತ್ತೆ ಈ ಸಂದರ್ಭದಲ್ಲಿ ಕೆಲವು ಗಲಾಟೆಗಳು ನಡೆಯುತ್ತೆ. ಅವುಗಳ ಬಗ್ಗೆ ಸ್ಪಲ್ಪ ನಿಗಾ ಇಡಬೇಕು ಎಂದು ಪೋಲಿಸ್ ಇಲಾಖೆಗೆ ಮುಖಂಡರುಗಳು ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಉಪ ಪೊಲೀಸ್ ಆಯುಕ್ತ ಮುತ್ತುರಾಜ್, ಮೈಸೂರಿನಲ್ಲಿ ಸಮನ್ವಯತೆಗೆ ಕೊರತೆ ಇಲ್ಲ. ಎಲ್ಲಾ ಧರ್ಮದಲ್ಲೂ ಉತ್ತಮ ರೀತಿಯಲ್ಲಿ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದಿರಾ. ನಾವು ಯಾವುದೇ ಹಬ್ಬ ಆಚರಣೆ ಮಾಡಿದರೂ ಸೂಕ್ತ ರೀತಿಯಲ್ಲಿ ಇರಬೇಕು. ಗಣೇಶ ಪ್ರತಿಷ್ಠಾಪನೆ ಮಾಡಿವುದರ ಜೊತೆಗೆ ಶಿಷ್ಟಾಚಾರ ಪಾಲಿಸಿ. ಗಣೇಶನನ್ನು ಚರಂಡಿ, ಗಲೀಜೂ ಜಾಗದಲ್ಲಿ ಕೂರಿಸಬೇಡಿ. ಕೆಲವೋಂದು ಸಂದರ್ಭದಲ್ಲಿ ಸಣ್ಣ ವಿಚಾರವನ್ನ ಕೆಟ್ಟದಾಗಿ ಅಪಪ್ರಚಾರ ಮಾಡುತ್ತಾರೆ. ಅದನ್ನ ನಿಲ್ಲಿಸಿ ಎಂದು ಸೂಚಿಸಿದರು.

ಕೆಲವು ಭಾಗಗಳಲ್ಲಿ ಹಬ್ಬವನ್ನ ಕಷ್ಟಪಟ್ಟು ನೋಡುವ ರೀತಿ ಮಾಡಲಾಗುತ್ತೆ. ಹಬ್ಬಗಳಲ್ಲಿ ಹೆಣ್ಣು ಮಕ್ಕಳು ಧೈರ್ಯದಿಂದ ಬಂದು ಆಚರಣೆ ಮಾಡುವ ರೀತಿ  ಹಬ್ಬ ಮಾಡಿ. ಭಯದಿಂದ ಬಂದು ಆಚರಣೆ ಮಾಡುವ ರೀತಿ ಮಾಡಬೇಡಿ ಎಂದು ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ಮನವಿ‌ ಮಾಡಿದರು.

Key words: ganesh festival- meeting- All Religion-leader-police-mysore