Friday, August 21, 2026

BDA Apartments

Home Front Page ಹೆಚ್.ಡಿಕೆ ಆರೋಪದಲ್ಲಿ ಸತ್ಯಾಂಶವಿಲ್ಲ: ಅವರಿಗೆ ಒಳ್ಳೆಯ ಕೆಲಸ ಸಹಿಸಲು ಆಗುತ್ತಿಲ್ಲ- ಸಚಿವ ಬಿ.ನಾಗೇಂದ್ರ.

ಹೆಚ್.ಡಿಕೆ ಆರೋಪದಲ್ಲಿ ಸತ್ಯಾಂಶವಿಲ್ಲ: ಅವರಿಗೆ ಒಳ್ಳೆಯ ಕೆಲಸ ಸಹಿಸಲು ಆಗುತ್ತಿಲ್ಲ- ಸಚಿವ ಬಿ.ನಾಗೇಂದ್ರ.

ಮೈಸೂರು,ಆಗಸ್ಟ್,9,2023(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವರ್ಗಾವಣೆ , ಕಮಿಷನ್ ದಂಧೆ, ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಕ್ರೀಡಾ ಸಚಿವ ಬಿ.ನಾಗೇಂದ್ರ, ಹೆಚ್.ಡಿ ಕುಮಾರಸ್ವಾಮಿ ಆರೋಪದಲ್ಲಿ ಸತ್ಯಾಂಶವಿಲ್ಲ.  ಅವರಿಗೆ ನಮ್ಮ ಸರ್ಕಾರದ ಒಳ್ಳೆಯ ಕೆಲಸಗಳನ್ನ ಸಹಿಸಲು ಆಗುತ್ತಿಲ್ಲ ಎಂದು ಟಾಂಗ್ ನೀಡಿದರು.

ಮೈಸೂರಿಗೆ ಆಗಮಿಸಿದ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರನ್ನು ನಗರದ ಕೊಲಾಂಬಿಯಾ ಏಷಿಯಾ ವೃತ್ತದ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹೆಚ್.ಡಿ ಕೋಟೆಯಲ್ಲಿ ವಿಶ್ವ ಬುಡಕಟ್ಟು ದಿನಾಚರಣೆಯಲ್ಲಿ ಸಚಿವ ಬಿ ನಾಗೇಂದ್ರ ಭಾಗಿಯಾಗಿ ನಂತರ ಬುಡಕಟ್ಟು ಆದಿವಾಸಿ ಹಾಡಿಗಳಿಗೆ ಭೇಟಿ ನೀಡಲು ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಸಚಿವ ನಾಗೇಂದ್ರ, ಕುಮಾರಸ್ವಾಮಿ 2ಬಾರಿ ಸಿಎಂ ಆಗಿದ್ದರು.  ಈ ಬಾರಿ ದೊಡ್ಡ ಕನಸಿಟ್ಟುಕೊಂಡು 40 ರಿಂದ 50 ಸ್ಥಾನ ಗೆದ್ದು ಅಧಿಕಾರ ಹಿಡಿಯುವ ಆಲೋಚನೆ ಅವರಲ್ಲಿತ್ತು. ಆದರೆ ಅವರ ಯೋಚನೆ ಉಲ್ಟಾ ಆಯಿತು. ಕೃಷಿ ಸಚಿವರು ಒಳ್ಳೆಯ ಕೆಲಸ ಮಾಡಿತ್ತಿದ್ದಾರೆ ಅದನ್ನ ತಡೆಯಲಾರದೆ ಅಪಾದನೆ ಮಾಡುತ್ತಿದ್ದಾರೆ ಅವರು ಮಾಡಿರುವಅಪಾದನೆಯೆಲ್ಲಾ ಸುಳ್ಳು ಎಂದರು.

ಸಿಎಂ ಸಹ ಹಲವು ಸಭೆಗಳನ್ನ ಮಾಡಿದ್ದಾರೆ. ಇಂದು ನಾನು ಕೂಡ ಸಭೆ ನಡೆಸುತ್ತಿದ್ದೇನೆ. ಮೈಸೂರು ದಸರಾದಲ್ಲಿ ಕ್ರೀಡೆಗೆ ಬಹಳ ದೊಡ್ಡ ಪಾತ್ರವಿದೆ. ಹೀಗಾಗಿ ಸುಸಜ್ಜಿತತವಾಗಿ ಅಚ್ಚುಕಟ್ಟಾಗಿ ಕ್ರೀಡೆ ನಡೆಸುವ ಕೆಲಸ ಮಾಡುತ್ತೇವೆ  ಎಂದು ಸಚಿವ ನಾಗೇಂದ್ರ ತಿಳಿಸಿದರು.

Key words: no truth -HDK’s -accusation- Minister- B. Nagendra-mysore