Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಮೃತ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಿವಾಸಕ್ಕೆ  ಪ್ರಮೋದ್ ಮುತಾಲಿಕ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ.

ಮೃತ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಿವಾಸಕ್ಕೆ  ಪ್ರಮೋದ್ ಮುತಾಲಿಕ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ.

ಮೈಸೂರು,ಆಗಸ್ಟ್,1,2023(www.justkannada.in): ಇತ್ತೀಚೆಗೆ ತಿ.ನರಸೀಪುರದಲ್ಲಿ ಕೊಲೆಯಾದ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಿವಾಸಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಟಿ.ನರಸೀಪುರದ ಶ್ರೀರಾಮ್‌ಪುರ ಕಾಲೋನಿಯ ನಿವಾಸಕ್ಕೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್ ವೇಣುಗೋಪಾಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಕೆ ಮಾಡಿದರು.

ಬಳಿಕ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ಎಷ್ಟೇ ದೊಡ್ಡ ಪ್ರಭಾವಿಗಳು ಇದ್ದರೂ ನಮಗೆ ಕಾನೂನು ಮತ್ತು ಪೋಲೀಸರ ಮೇಲೆ ನಂಬಿಕೆ ಇದೆ. ಪ್ರಭಾವಿಗಳು ಎಷ್ಟೇ ನಾಟಕ ಆಡಿದ್ರು, ನಮ್ಮ ದೇಶಭಕ್ತಿ, ಸಂಘಟನೆ ಮುಂದೆ ನಡೆಯಲ್ಲ. ಇಂತಹ ಕೊಲೆಗಳಿಗೆ, ಬೆದರಿಕೆಗಳಿಗೆ ನಾವು ಹೆದರಲ್ಲ. ಪ್ರಭಾವಿಗಳು, ಕಾಂಗ್ರೆಸ್ ನವರು ಇದರಲ್ಲಿ ಮೂಗು ತೂರಿಸಿದ್ರೆ ಹುಷಾರ್. ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹನುಮ ಜಯಂತಿ ಮಾಡೋದು ಏನು ಪಾಪದ ಕೆಲಸಾನಾ…? ನಿಮ್ಮ ರೀತಿ ನಾವೇನು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದೇವಾ..?  ವೇಣುಗೋಪಾಲ್ ಕೊಲೆ ಪ್ರಕರಣದಲ್ಲಿ ರಾಜಕೀಯ ಶಕ್ತಿ ಬಳಸಿದರೆ ಲಕ್ಷಾಂತರ ಹಿಂದೂ ಕಾರ್ಯಕರ್ತರು ನರಸೀಪುರ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರಮೋದ್ ಮುತಾಲಿಕ್  ಗುಡುಗಿದರು.

Key words:  Pramod Muthalik -visits -residence -Youth Brigade –activist- Venugopal