Saturday, September 26, 2026

BDA Apartments

ಸಿಎಂ ಸ್ಥಾನ ನನಗೆ ಮೀಸಲಿಟ್ಟಿರಬಹುದು: ಹೀಗಾಗಿ ಸಚಿವ ಸ್ಥಾನ ನೀಡಿಲ್ಲ ಎಂದ್ರು...
Home Front Page ಸಿಎಂ ಸ್ಥಾನ ನನಗೆ ಮೀಸಲಿಟ್ಟಿರಬಹುದು: ಹೀಗಾಗಿ ಸಚಿವ ಸ್ಥಾನ ನೀಡಿಲ್ಲ ಎಂದ್ರು ಶಾಸಕ ಆರ್.ವಿ ದೇಶಪಾಂಡೆ.

ಸಿಎಂ ಸ್ಥಾನ ನನಗೆ ಮೀಸಲಿಟ್ಟಿರಬಹುದು: ಹೀಗಾಗಿ ಸಚಿವ ಸ್ಥಾನ ನೀಡಿಲ್ಲ ಎಂದ್ರು ಶಾಸಕ ಆರ್.ವಿ ದೇಶಪಾಂಡೆ.

ಕಾರವಾರ ಜುಲೈ,15,2023(www.justkannada.in):   ತಮಗೆ ಸಚಿವ ಸ್ಥಾನ ನೀಡದಿರಲು ಕಾರಣವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಹಾಸ್ಯಭರಿತವಾಗಿ ಉತ್ತರಿಸಿದ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ, ಸಿಎಂ ಸ್ಥಾನ ನನಗೆ ಮೀಸಲಿಟ್ಟಿರಬಹುದು. ಹೀಗಾಗಿ ಸಚಿವ ಸ್ಥಾನ ನೀಡಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇಂದು  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಆರ್.ವಿ ದೇಶಪಾಂಡೆ, ರಾಜ್ಯದಲ್ಲಿ ಬಿಜೆಪಿಯನ್ನ  ಗ್ಯಾರಂಟಿಗಳ ಮೂಲಕವೇ ಸೋಲಿಸಿದ್ದೇವೆ. ಕಾಂಗ್ರೆಸ್  ನೀಡಿದ 5 ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತಿದೆ.  ವಿರೋಧ ಪಕ್ಷದವರು ಜನಪರ ಕಾರ್ಯಕ್ರಮಗಳನ್ನ ಟೀಕಿಸುವುದನ್ನ ಬಿಟ್ಟು ಮೆಚ್ಚಿಕೊಳ್ಳಬೇಕು ಎಂದು ಟಾಂಗ್ ನೀಡಿದರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕ ಕಾಮಗಾರಿ ವಿಚಾರವಾಗಿ ಮಾತನಾಡಿದ ಆರ್.ವಿ ದೇಶಪಾಂಡೆ,  ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುತ್ತಿರುವುದು ತಪ್ಪು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹಿಸಬಾರದು. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೂ ಪತ್ರ ಬರೆಯುತ್ತೇನೆ ಎಂದರು.

Key words: MLA- RV Deshpande – post of CM – reserved -me.