ಬೆಂಗಳೂರು,ಜುಲೈ,13,2023(www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡೇ ತಿಂಗಳ ಅವಧಿಯಲ್ಲಿ ವರ್ಗಾವಣೆಯ ಕರಾಳ ದಂಧೆ ಬಯಲಾಗಿದೆ. ಪ್ರತಿ ಇಲಾಖೆಯಲ್ಲೂ ರೇಟ್ ಕಾರ್ಡ್ ಇದೆ ಎಂದು ಮಾಜಿ ಸಚಿವ ಆರ್.ಅಶೋಕ್ ಆರೋಪಿಸಿದರು.![]()
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಬುಧವಾರ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ದರ ಪಟ್ಟಿ ಬಿಡುಗಡೆಗೂ ಮುನ್ನ ನನಗೆ ಅದನ್ನು ತೋರಿಸಿದ್ದರು. ಕೃಷಿ ಇಲಾಖೆಯಲ್ಲಿ ಈ ರೀತಿಯ ದರ ಪಟ್ಟಿ ನಿಗದಿಯಾಗಿದೆ ಅಂತ ತೋರಿಸಿದ್ದರು ಎಂದರು.
ಎರಡೇ ತಿಂಗಳಲ್ಲಿ ವರ್ಗಾವಣೆಯ ಕರಾಳ ದಂಧೆ ಬಯಲಾಗಿದೆ. ನನಗೆ ಕುಮಾರಸ್ವಾಮಿ ಆ ದಾಖಲೆ ತೋರಿಸಿದರು. ಅದನ್ನು ಸದನದಲ್ಲಿ ತೋರಿಸಿದರೆ ಗಲಾಟೆ ಆಗುತ್ತೆ ಅಂತ ಅವರು ತೋರಿಸಲಿಲ್ಲ. ಹಾಗಾಗಿ ಅದನ್ನು ಸರ್ಕಾರಕ್ಕೆ, ಸಿಎಂಗೆ ಕೊಟ್ಟಿದ್ದಾರೆ ಎಂದು ಅಶೋಕ್ ತಿಳಿಸಿದರು.
Key words: Rate card – each –department-Congress –government- R. Ashok.







