Saturday, August 15, 2026

BDA Apartments

Home Front Page ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಮುಂದಾದ ಬಿಬಿಎಂಪಿ: ಅಧಿಕಾರಿ ನೇಮಕ.

ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಮುಂದಾದ ಬಿಬಿಎಂಪಿ: ಅಧಿಕಾರಿ ನೇಮಕ.

ಬೆಂಗಳೂರು,ಜುಲೈ,11,2023(www.justkannada.in): ಇಂದಿರಾ ಕ್ಯಾಂಟಿನ್​ನ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ 100 ಕೋಟಿ ಬಿಡುಗಡೆ ಮಾಡಿದ್ದು, ಇದೀಗ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಬಿಬಿಎಂಪಿ ಮುಂದಾಗಿದೆ.

ಇಂದಿರಾ ಕ್ಯಾಂಟಿನ್ ನಲ್ಲಿ ಊಟ, ತಿಂಡಿಗೆ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.  ಡಿಸಿಎಂ ಡಿಕೆ ಶಿವಕುಮಾರ್​ ಅವರ ಭೇಟಿ ವೇಳೆ ಇಂದಿರಾ ಕ್ಯಾಂಟೀನ್​ ನಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಈಗ ಪ್ರತಿ ಇಂದಿರಾ ಕ್ಯಾಂಟೀನ್​ಗೆ ಪಾಲಿಕೆ ಅಧಿಕಾರಿ ನೇಮಕ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಇಂದಿರಾ ಕ್ಯಾಂಟೀನ್ ಆಹಾರ ಗುಣಮಟ್ಟ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಂದಿರಾ ಕ್ಯಾಂಟೀನ್​ನಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಪರಿಶೀಲನೆ, ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟೀನ್ ಸ್ವಚ್ಚತೆ ಬಗ್ಗೆ ನಿಗಾ ಇಡಲು ತಮ್ಮದೇ ಅಧಿಕಾರಿ ನೇಮಿಸಲು ಬಿಬಿಎಂಪಿ ಪಾಲಿಕೆ ಮುಂದಾಗಿದೆ.

ಹಾಗೆಯೇ ಇಂದಿರಾ ಕ್ಯಾಂಟಿನ್ ಗೆ ಹೊಸ ಸಹಾಯವಾಣಿ ಆರಂಭ ಮಾಡಲು ನಿರ್ಧರಿಸಿದ್ದು, 1533 ಸಹಾಯವಾಣಿ ಮೂಲಕ ಜನರಿಗೆ ಸೇವೆ ನೀಡಲು ಹೊಸ ಸಹಾಯವಾಣಿ ರೂಪಿಸಲಾಗಿದೆ. ಎಲ್ಲಾ ಇಂದಿರಾ ಕ್ಯಾಂಟೀನ್​ಗೂ ಸಹಾಯವಾಣಿ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಇದರ ಜೊತೆಗೆ ರಸ್ತೆ ಬದಿ ಕಸ ಸುರಿಯುವುದನ್ನ ತಡೆಯಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ಕಸ ಸುರಿಯುವವರ ಮೇಲೆ ನಿಗಾ ವಹಿಸಲು ಪಾಲಿಕೆ ಮಾರ್ಷಲ್ಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ತಂಡ ರಚನೆ ಮಾಡಿದೆ. ಈ ತಂಡ ರಸ್ತೆ ಬದಿ ಕಸ ಹಾಕುವವರ ಮೇಲೆ ನಿಗಾ ವಹಿಸಲಿದೆ.

Key words: BBMP- appoints -officer –Indira canteen