ಮೈಸೂರು,ಜುಲೈ,10,2023(www.justkannada.in): ತಿ.ನರಸೀಪುರದಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯವೊಂದು ವ್ಯಕ್ತವಾಗಿದೆ. ![]()
ಹೌದು, ಹನುಮ ಜಯಂತಿ ಮೆರವಣಿಗೆ ವೇಳೆ ಪುನೀತ್ ರಾಜ್ ಕುಮಾರ್ ಪೋಟೊ ತೆಗೆಸಿದ್ದೇ ವೇಣುಗೋಪಾಲ್ ಹತ್ಯೆಗೆ ಕಾರಣವಾಯಿತಾ ಎಂಬ ಅನುಮಾನ ವ್ಯಕ್ತವಾಗಿದೆ.
ಮೊನ್ನೆ ಟಿ.ನರಸೀಪುರದಲ್ಲಿ ಹನುಮ ಜಯಂತಿ ಮೆರವಣಿಗೆ ನಡೆದಿತ್ತು. ಈ ವೇಳೆ ವ್ಯಾನ್ ನಲ್ಲಿ ಭಾರತ ಮಾತೇ ಪೋಟೊ ಮುಂದೆ ನಟ ದಿ. ಪುನೀತ್ ರಾಜ್ ಕುಮಾರ್ ಪೋಟೋ ಹಾಕಿದ್ದರು. ಈ ವೇಳೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಇಲ್ಲಿ ಯಾವ ವ್ಯಕ್ತಿಯ ಪೋಟೋ ಹಾಕೋದು ಬೇಡ ಎಂದು ಕೊಲೆಯಾದ ವೇಣುಗೋಪಾಲ್ ತೆಗೆಸಿದ್ದರು.
ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಅವರ ಗುಂಪಿನಲ್ಲೆ ಗಲಾಟೆಯಾಗಿತ್ತು. ನಂತರ ನಿನ್ನೆ ಮಧ್ಯಾಹ್ನ ಕೂಡ ಜಗಳವಾಗಿತ್ತು. ಬಳಿಕ ರಾತ್ರಿ ರಾಜಿ ಪಂಚಾಯಿತಿ ನೆಪದಲ್ಲಿ ಕರೆಸಿಕೊಂಡು ಕೊಲೆ ಮಾಡಾಲಾಗಿದೆ ಎಂದು ಹತ್ಯೆಯಾದ ವೇಣುಗೋಪಾಲ್ ಪತ್ನಿ ಪೂರ್ಣಿಮ ಹೇಳಿಕೆ ನೀಡಿದ್ದಾರೆ.
Key words: Punith rajkumar -photo – young brigade –activist-murder-T.Narsipur







