Saturday, August 22, 2026

BDA Apartments

Home Front Page ಗೃಹಜ್ಯೋತಿಗೆ ಅರ್ಜಿ ಹಾಕದಿದ್ರೆ ಮುಂದಿನ ತಿಂಗಳು ಬಿಲ್ ಬರುತ್ತೆ- ಇಂಧನ ಸಚಿವ ಕೆ.ಜೆ ಜಾರ್ಜ್.

ಗೃಹಜ್ಯೋತಿಗೆ ಅರ್ಜಿ ಹಾಕದಿದ್ರೆ ಮುಂದಿನ ತಿಂಗಳು ಬಿಲ್ ಬರುತ್ತೆ- ಇಂಧನ ಸಚಿವ ಕೆ.ಜೆ ಜಾರ್ಜ್.

ಚಿಕ್ಕಮಗಳೂರು,ಜುಲೈ,1,2023(www.justkannada.in):  ಇಂದಿನಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಲಿದ್ದು ಈ ನಡುವೆ ಗೃಹಜ್ಯೋತಿಗೆ ಅರ್ಜಿ ಹಾಕದಿದ್ರೆ ಮುಂದಿನ ತಿಂಗಳು ಬಿಲ್ ಬರುತ್ತೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಜೆ ಜಾರ್ಜ್,  ಈ ತಿಂಗಳಿಂದ ಉಚಿತ ವಿದ್ಯುತ್ ಜಾರಿಯಾಗಲಿದೆ. ಜೂನ್ ತಿಂಗಳ ಬಿಲ್ ಜುಲೈ ತಿಂಗಳಲ್ಲಿ ಬರುತ್ತೆ. ಅರ್ಜಿ ಹಾಕದಿರುವವರಿಗೆ ಮುಂದಿನ ತಿಂಗಳು ಬಿಲ್ ಬರುತ್ತದೆ ಎಂದರು.

ಗೃಹಜ್ಯೋತಿಗೆ  86.5 ಲಕ್ಷ ಜನರು ಅರ್ಜಿ ಹಾಕಲಾಗಿದೆ.  ಯೋಜನೆಯ ಲಾಭ ಪಡೆಯಲು ಅರ್ಜಿ ಹಾಕಲೇ ಬೇಕು. ಹೆಚ್ಚಿನ ಜನರು ಅರ್ಜಿ ಹಾಕುತ್ತಿರುವುದರಿಂದ ಸರ್ವರ್ ಸಮಸ್ಯೆ ಇದೆ. ಹೀಗಾಗಿ ಕೆಇಬಿಗೆ ಹೋಗಿ ಅರ್ಜಿ ಕೊಡಿ ಎಂದು ಸಚಿವ ಕೆಜೆ ಜಾರ್ಜ್ ತಿಳಿಸಿದರು.

Key words: don’t- apply – Grihajyoti, – bill – next month-Energy Minister- KJ George.