ಬೆಂಗಳೂರು, ಜೂನ್ 18, 2023 (www.justkannada.in): ರಾಜಧಾನಿ ಬೆಂಗಳೂರಿಗೆ ಹೊಸ ರೂಪ ನೀಡಿ, ಸಮಗ್ರ ಅಭಿವೃದ್ಧಿ ಮೂಲಕ ಬ್ರ್ಯಾಂಡ್ ಹೆಸರನ್ನ ಮತ್ತೆ ಸಿಗುವಂತೆ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಪ್ರಮುಖರ ಸಭೆ ಕರೆದು ಕೆಲ ಸಲಹೆ ಸೂಚನೆ ಪಡೆದಿದ್ದಾರೆ.
ಬೆಂಗಳೂರು ಸರ್ವತೋಮುಖ ಪ್ರಗತಿಗೆ ಸಲಹೆ, ಅಭಿಪ್ರಾಯ ಆಲಿಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸಬೆ ನಡೆಸಿದ್ದರು.
ಐಟಿಬಿಟಿ ದಿಗ್ಗಜರು ಸೇರಿದಂತೆ 42 ಪ್ರಮುಖ ನಾಯಕರೊಂದಿಗೆ ಬ್ರಾಂಡ್ ಬೆಂಗಳೂರು ಕುರಿತು ಚರ್ಚೆ ಮಾಡಿದರು. ಬೆಂಗಳೂರಿನ ಅಭಿವೃದ್ಧಿಗೆ ಆರು ತಿಂಗಳಲ್ಲಿ ನೀಲನಕ್ಷೆ ರೆಡಿ ಮಾಡುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ.
ಹೈಡೆನ್ಸಿಟಿ ಕಾರಿಡಾರ್, ಕಸ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ರಸ್ತೆ ಅಗಲೀಕರಣ, ಪಾದಚಾರಿ ಮಾರ್ಗ ಸುಧಾರಣೆ ಎಲಿವೇಟೆಡ್ ರಸ್ತೆ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳ ಬಗ್ಗೆ ಶಿವಕುಮಾರ್ ಸಲಹೆ ಪಡೆದಿದ್ದಾರೆ.







